

ಬೆಂಗಳೂರು: ಬೆಂಗಳೂರಿನ ಟೆಕ್ಕಿಯೊಬ್ಬರು ಲವ್ ಜಿಹಾದ್ ಬಲೆಯಲ್ಲಿ ಬಿದ್ದಿದ್ದಾರೆ. ಕಾಶ್ಮೀರದ ಮುಸ್ಲಿಂ ಯುವಕ ತನ್ನನ್ನು ಬಳಸಿಕೊಂಡು, ಮತಾಂತರ ಮಾಡಿ ಈಗ ಬೆದರಿಕೆ ಹಾಕುತ್ತಿದ್ದಾನೆ. ನಾನ್ ಲವ್ ಜಿಹಾದ್ಗೆ ಒಳಗಾಗಿದ್ದೇನೆಂದು ಆಕೆ ಟ್ವೀಟ್ ಮಾಡುವ ಮೂಲಕ ಪೊಲೀಸರಿಗೆ ದೂರು ನೀಡಿದ್ದಾರೆ.
ನಾನು ಲವ್ ಜಿಹಾದ್ಗೆ ಒಳಗಾಗಿದ್ದೇನೆ…ನನ್ನ ಮೇಲೆ ಅತ್ಯಾಚಾರ ನಡೆದಿದೆ. ಬಲವಂತವಾಗಿ ಅಸ್ವಾಭಾವಿಕ ಲೈಂಗಿಕ ದೌರ್ಜನ್ಯ ನಡೆದಿದೆ. ನಾನು ಅಪಾಯದಲ್ಲಿದ್ದೇನೆ. ತುರ್ತಾಗಿ ನನಗೆ ಬೆಂಗಳೂರು ಪೊಲೀಸರ ಸಹಾಯ ಬೇಕಿದೆ ಎಂದು ಟ್ವೀಟ್ ಮಾಡಿ, ಪಿಎಂ ಮೋದಿ, ರಾಜ್ಯ ಪೊಲೀಸ್ ಮಹಾನಿರ್ದೇಶಕರು ಹಾಗೂ ಬೆಂಗಳೂರು ಸಿಟಿ ಪೊಲೀಸ್ರಿಗೆ ಟ್ಯಾಗ್ ಮಾಡಿದ್ದಾಳೆ.
ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಸುದ್ದಿ ಗಮನಕ್ಕೆ ಬಂದ ಕೂಡಲೇ ಬೆಳ್ಳಂದೂರು ಪೊಲೀಸರು ಟ್ವೀಟ್ ಸಂಬಂಧ ಮಾಹಿತಿ ಕಲೆ ಹಾಕುತ್ತಿದ್ದಾರೆ. ಸಂತ್ರಸ್ತೆ ಬೆಂಗಳೂರು ಪೊಲೀಸರ ಜತೆಗೆ ಕಾಶ್ಮೀರ ಪೊಲೀಸರಿಗೂ ಟ್ವೀಟ್ ಮಾಡಿ ನ್ಯಾಯ ರಕ್ಷಣೆ ಕೊಡಿ ಎಂದು ಮನವಿ ಮಾಡಿದ್ದಾಳೆ.
ಎಲೆಕ್ಟ್ರಾನಿಕ್ ಸಿಟಿ ಸಮೀಪದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಯುವತಿಗೆ ಫೇಸ್ಬುಕ್ ಮೂಲಕವಾಗಿ ಕಾಶ್ಮೀರ ಯುವಕನ ಪರಿಚಯವಾಗಿದೆ. ನಂತರ ಇಬ್ಬರ ಸ್ನೇಹ ಪ್ರೀತಿಯಾಗಿದೆ. ಇಬ್ಬರ ನಡುವೆ ಹಣಕಾಸಿನ ವ್ಯವಹಾರವೂ ನಡೆದಿದೆ. ಮದುವೆ ಆಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಮಾಡಿದ್ದಾನೆ. ಬಳಿಕ ಬಲವಂತವಾಗಿ ಆಕೆಯನ್ನು ಮತಾಂತರ ಮಾಡಿಸಿದ್ದಾನೆ. 2019ರಿಂದ ಇಬ್ಬರು ಜೊತೆಯಲ್ಲೇ ವಾಸವಾಗಿದ್ದರು. ನಂತರ ಯುವಕ ಸದ್ಯ ಮದ್ವೆಯಾಗೋದಿಲ್ಲ ಎಂದು ಯುವತಿಯನ್ನ ಅವೈಡ್ ಮಾಡಿದ್ದಾನೆ. ಯುವತಿಗೆ ಪ್ರಾಣ ಬೆದರಿಕೆ ಹಾಕಿದ್ದಾನೆ. ಈ ಕುರಿತಾಗಿ ಯುವತಿ ಸಾಲುಸಾಲು ಆರೋಪ ಮಾಡಿದ್ದಾಳೆ.