ರೈಲ್ವೆ ಹಳಿಗಳ ನಡುವೆ ಕಳೆದುಹೋದ 'ಇಯರ್​ಫೋನ್' ಹುಡುಕುತ್ತಿದ್ದ ಯುವಕ ಮೇಲೆ ಹರಿದ ಟ್ರೈನ್!​ ಮುಂದೇನಾಯ್ತು ಗೊತ್ತೇ? | Earphones

dk (76)
Published on

ಚೈನ್ನೈ:ರೈಲ್ವೆ ಹಳಿಗಳ ನಡುವೆ ಕಳೆದುಹೋದ ತನ್ನ ಇಯರ್​ ಫೋನ್​​ಗಳನ್ನು(Earphones )ಹುಡುಕುತ್ತಿದ್ದ 19ರ ಯುವಕನ ಮೇಲೆ ಟ್ರೈನ್​ ಹರಿದು ಮೃತಪಟ್ಟಿರುವ ಘಟನೆ ಇಲ್ಲಿನ ಕೋಡಂಬಾಕ್ಕಂ ರೈಲ್ವೆ ನಿಲ್ದಾಣದ ಬಳಿ ನಡೆದಿದೆ.

ವಿಲ್ಲುಪುರಂ ಜಿಲ್ಲೆಯ ಚಿನ್ನಸೆಲಂ ಬಳಿ ಇರುವ ಸೊರತುರಿನವರಾದ ಕಾಲೇಜು ವಿದ್ಯಾರ್ಥಿ ರಾಜಗೋಪಾಲ್​(19) ಮೃತ. ಚೈನ್ನೈನ ನಂದನ ಕಲಾ ಸರ್ಕಾರಿ ಕಾಲೇಜಿನಲ್ಲಿ ದ್ವೀತಿಯ ವರ್ಷದ ಬಿಎಸ್ಸಿ ಪದವಿ ವ್ಯಾಸಂಗ ಮಾಡುತ್ತಿದ್ದು, ಹಾಸ್ಟೆಲ್​​ನಲ್ಲಿ ವಾಸವಾಗಿದ್ದನು. ಕಾಲೇಜು ಸಮಯದ ಬಳಿಕ ಪಾರ್ಟ್​ಟೈಮ್​ ಕೆಲಸ ಮಾಡುತ್ತಿದ್ದನು.

ಶನಿವಾರ ಕೆಲಸಕ್ಕೆ ತೆರಳುವಾಗ ಟ್ರೈನ್​ ಇಳಿದು ಹಳಿ ದಾಡಬೇಕಾದ ತನ್ನ ಇಯರ್​ಫೋನ್​ ಕೆಳಗೆ ಬಿದ್ದು ಕಳೆದಿದೆ. ಇದನ್ನು ಸಲ್ಪಹೊತ್ತು ಅಲ್ಲೆ ಹುಡುಕಾಟ ಮಾಡುತ್ತಿದ್ದಾಗ ಮತ್ತೊಂದು ರೈಲು​ ಇತನ ಮೈ ಮೇಲೆ ಹರಿದೆ.ಇದರ ಪರಿಣಾಮ ರಾಜಗೋಪಾಲ್​​ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಈ ಕುರಿತು ರೈಲ್ವೆ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net