200 ರೂ. ನೋಟಿನ ಕಂತುಗಳನ್ನು ರಸ್ತೆ ಬದಿ ಎಸೆದು ವಿಡಿಯೋ ಹರಿಬಿಟ್ಟ ಯುವಕ; ಮುಂದೇನಾಯ್ತು ಗೊತ್ತೇ?

dk (19)
Published on

ಹೈದಾರಾಬಾದ್: 30 ವರ್ಷದ ಯೂಟ್ಯೂಬರ್​ ಒಬ್ಬ 200 ರೂ. ನೋಟುಗಳ ಕಂತುಗಳನ್ನು ಎಸೆಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗಿದ್ದು, ಇದೀಗ ಈ ಯುವಕನನ್ನು ಬಂಧಿಸಲಾಗಿದೆ.

ಸಾರ್ವಜನಿರಿಗೆ ಉದ್ದೇಶಪೂರ್ವಕ ತೊಂದರೆ ನೀಡಿದ್ದಾರೆ ಎಂಬ ಆರೋಪದ ಮೇಲೆ ಯೂಟ್ಯೂಬರ್,​ ಹೈದರಾಬಾದ್​ ಬಾಲಾನಗರ ನಿವಾಸಿ ಭಾನಚಂದ್ರು ಅಲಿಯಾಸ್​ ಆ್ಯಂಕರ್​ ಚಂದ್ರು ವಿರುದ್ಧ ಎಫ್​ಐಆರ್​ ದಾಖಲಾಗಿದ್ದು, ಬಳಿಕ ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ: ಈ ದಿನಾಂಕದಂದು ಜನಿಸಿದವರಿಗೆ 2025ರಲ್ಲಿ ರಾಜಯೋಗ! ನೀವು ಹುಟ್ಟಿದ್ದು ಇದೇ ದಿನಾನಾ? Numerology ವಿಡಿಯೋದಲ್ಲಿ ಏನಿದೆ? ಸಿಟಿ ಹೊರ ವಲಯದ ರಿಂಗ್​ ರೋಡ್​ನಲ್ಲಿ 200 ರೂ.ನೋಟುಗಳ ಬಂಡಲ್​ಗಳನ್ನು ಎಸೆಯುತ್ತಿರುವ ವಿಡಿಯೋ ಮಾಡಿದ್ದಾನೆ. ಯಾರಾದರೂ ಬಂದು ನೋಟುಗಳು ತಗೆದುಕೊಳ್ಳಬಹುದು ಎಂದು ಹೇಳುತ್ತಿರುವ ದೃಶ್ಯಗಳು ವಿಡಿಯೋದಲ್ಲಿ ಸೆರೆಯಾಗಿವೆ. ಈ ವಿಡಿಯೋ ಕ್ಷಣ ಮಾತ್ರದಲ್ಲಿ ಲಕ್ಷಾಂತರ ವಿಕ್ಷಣೆ ಪಡೆದಿದೆ. ಈ ಹಿನ್ನೆಲೆ​ ಸಾರ್ವಜನಿರು ಹಣ ಸಿಗುತ್ತದೆ ಎಂಬ ಕಾರಣಕ್ಕೆ ಸ್ಥಳಕ್ಕೆ ಬಂದು ಸೇರಿದ್ದಾರೆ. ಅಲ್ಲಿ ಯಾವುದೇ ನೋಟಿನ ಕಂತುಗಳಾಗಲಿ ಅಥವಾ ದುಡ್ಡು ಇಲ್ಲ ಎಂದು ಜನರು ಸ್ಪಷ್ಟಪಡಿಸಿದ್ದಾರೆ.

ಅಲ್ಲದೇ, ವಿಡಿಯೋ ಕಾರಣದಿಂದಾಗಿ ಸ್ಥಳಕ್ಕೆ ಸಾವಿರಾರು ಜನರು ಆಗಮಿಸಿದ ಕಾರಣ ಭಾರೀ ಪ್ರಮಾಣದಲ್ಲಿ ಟ್ರಾಫಿಕ್​ ಜಾಮ್ ಉಂಟಾಗಿದೆ. ಟ್ರಾಫಿಕ್​ ಸರಿಪಡಿಸಲು ಸಂಚಾರ ಪೊಲೀಸರು ಹರಸಾಹಸ ಪಟ್ಟಿದ್ದಾರೆ. ಅಲ್ಲಿನ ಜನರಿಗೆ ಮಾತ್ರವಲ್ಲ ವಾಹನ ಸಂಚಾರ ಮತ್ತು ಪ್ರಯಾಣಿಕರಿಗೆ ತೊಂದರೆಯಾಗಿದೆ ಎಂದು ವರದಿಗಳು ಉಲ್ಲೇಖಿಸಿವೆ.  ಇತ್ತೀಚಿಗೆ ಯುಟ್ಯೂಬರ್ ಒಬ್ಬ​ ಗಾಳಿಯಲ್ಲಿ ಹಣ ತೂರಿದ ವಿಡಿಯೋವೊಂದು ವೈರಲ್​ ಆಗಿತ್ತು. ಇದರ ಬೆನ್ನಲ್ಲೆ ಇಂತದ್ದೊಂದು ಘಟನೆ ಮರುಕಳಿಸಿದೆ,(ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net