

ಥಾಯ್ಲೆಂಡ್: ಇಲ್ಲಿನ ಸೋಷಿಯಲ್ ಮೀಡಿಯಾ ಪ್ರಭಾವಿ ಯುವಕನೊಬ್ಬ ಕೇವಲ 20 ನಿಮಿಷಗಳಲ್ಲಿ ಎರಡು ಪುಲ್ ಬಾಟಲ್ ವಿಸ್ಕಿ ಕುಡಿದ ಹಿನ್ನೆಲೆ ಮೃತಪಟ್ಟಿದ್ದಾನೆ ಎಂದು ವರದಿಯಾಗಿದೆ.
ಸಾಮಾಜಿಕ ಮಾಧ್ಯಮಲ್ಲಿ 'ಬ್ಯಾಂಕ್ ಲಿಸೇಸ್ಟರ್' ಎಂದು ಕರೆಯಲ್ಪಡುವ ಥಾಯ್ಲೆಂಡ್ ನಿವಾಸಿ ಥಾನಕರ್ನ್ ಕಾಂಥಿ(21) ಮೃತ ಯುವಕ. 21 ಬಾಟಲ್ಗಳನ್ನು ಕುಡಿಯಲು ಬೆಟ್ಟಿಂಗ್ ಕಟ್ಡಿದ್ದ ಇತ, ಅದಾಗಲೇ ಕುಡಿದ್ದ, ಈ ಹಿನ್ನೆಲೆ ಏಕಾಏಕಿ 2 ಫುಲ್ ಬಾಟಲ್ಗಳನ್ನು ಕೆಳಗಿಳಿಸದಂತೆ 20 ನಿಮಿಷಗಳಲ್ಲಿ ಕಡಿದ ಹಿನ್ನೆಲೆ ಪ್ರಜ್ಞಾಹೀನಾ ಸ್ಥಿತಿಯಲ್ಲಿ ಬಿದ್ದಿದ್ದಾನೆ. ಎಬ್ಬಿಸಲು ಪ್ರಯತ್ನಪಟ್ಟರು ಸಾಧ್ಯವಾಗಿಲ್ಲ. ಬಳಿಕ ಆಸ್ಪತ್ರೆಗೆ ಕರೆದೊಯ್ದಿದ್ದು, ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಅಲ್ಪಾವಧಿಯಲ್ಲಿ ಅಧಿಕ ಅಲ್ಕೋಹಾಲ್ ಸೇವನೆಯಿಂದ ಅದು ದೇಹದಲ್ಲಿ ವಿಷವಾಗಿ ಹರಡಿ ಮೃತಪಟ್ಟಿರುವುದಾಗಿ ಎಂದು ವೈದ್ಯರ ತಂಡ ಮಾಹಿತಿ ಕೊಟ್ಟಿದ್ದಾರೆ.
ಮೃತ ಥಾನಕರ್ನ್ ಕಾಂಥಿ ಪರ ಮತ್ತು ವಿರುದ್ಧ ಬೆಟ್ಟಿಂಗ್ ಕಟ್ಟಿದ್ದವರನ್ನು ಥಾಯ್ ಪೊಲೀಸರು ಬಂಧಿಸಿದ್ದಾರೆ. ಅಲ್ಲದೆ, ಅವರಿಂದ ಪಿಸ್ತೂಲ್, ಬ್ಯಾಂಕ್ ಪಾಸ್ಬುಕ್, ಮೊಬೈಲ್ ಪೋನ್ ಮತ್ತು ಕೆಲವಷ್ಟು ಸಿಮ್ ಕಾರ್ಡ್ಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.ತನಿಖೆ ವೇಳೆ ಬಂಧಿತರು ಅಪರಾಧವನ್ನು ಒಪ್ಪಿಕೊಂಡಿದ್ದಾರೆ. ಪ್ರಕರಣ ಕೋರ್ಟ್ನಲ್ಲಿದ್ದು, 10 ವರ್ಷಗಳ ಜೈಲು ಶಿಕ್ಷೆ ಮತ್ತು 50 ಸಾವಿರ ಅಧಿಕ ದಂಡವನ್ನು ಕಟ್ಟಬೇಕಾಗುತ್ತದೆ ಎಂದು ಅಂದಾಜಿಸಲಾಗಿದೆ.
ಕಾಂಥಿಯ ಸವಾಲು ಇದೇ ಮೊದಲಲ್ಲ!
ಮೃತ ಕಾಂಥಿ ಕುಡಿಯಲು ಬೆಟ್ಟಿಂಗ್ ಕಟ್ಟುವುದು ಇದೇ ಮೊದಲಲ್ಲ. ಇದಕ್ಕೂ ಮುಂಚೆ ಇಂತಹ ಸಹಾಸಗಳು ಹಲವಾರು ಬಾರಿ ಮಾಡಿದ್ದಾನೆ. ಇತ್ತೀಚಿಗಷ್ಟೇ ಇತನ ಜನ್ಮದಿನ ಅಂಗವಾಗಿ 25 ಸಾವಿರ ಹಣಕ್ಕೆ 350 ಎಂಎಲ್ ಪುಲ್ಬಾಟಲ್ ಕೆಲವೇ ನಿಮಿಷಗಳಲ್ಲಿ ಕುಡಿದು ಮುಗಿಸಿದ್ದಾನೆ ಎಂದು ಬ್ಯಾಂಕಕ್ ಪೋಸ್ಟ್ ವರದಿ ಮಾಡಿದೆ. ಇತನ ಈ ವರ್ತನೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಬಾರಿ ಸದ್ದು ಮಾಡಿದ್ದು, ಇತನ ಪಾಲೋವರ್ಸ್ ಮತ್ತು ನೆಟ್ಟಿಗರ ಬೆಚ್ಚಿಬಿದಿದ್ದಾರೆ. (ಏಜೆನ್ಸೀಸ್)