ಸಮಂತಾ -ಶೋಭಿತಾ, ನಾಗಚೈತನ್ಯ ಕಾಂಬಿನೇಷನ್​ನಲ್ಲಿ ಬಂದ ಸಿನಿಮಾ ಯಾವುದು ಗೊತ್ತಾ? Samantha

samantha
Published on

ಸಿನಿಮಾದ ಶೂಟಿಂಗ್‌ನಲ್ಲಿ ನಟಿಸಿ ಅರ್ಧಕ್ಕೆ ಹೊರ ನಡೆದಿದ್ದ ಶೋಭಿತಾ

ಹೈದ್ರಾಬಾದ್​: ಸಮಂತಾ ( Samantha ), ನಾಗಚೈತನ್ಯ ವಿಚ್ಛೇದನದ ನಂತರ ನಾಗಚೈತನ್ಯ ಶೋಭಿತಾ ಧೂಳಿಪಾಲರನ್ನು ಪ್ರೀತಿಸಿ ಮದುವೆಯಾದರು. ಸಮಂತಾ.. ನಾಗಚೈತನ್ಯ ವಿಚ್ಛೇದನ ಪಡೆದು ಮೂರು ವರ್ಷಕ್ಕೂ ಹೆಚ್ಚಿನ ಸಮಯ ಕಳೆದಿದೆ. ಆದರೆ, ಈ ಮೂವರು ಮತ್ತೆ ಸುದ್ದಿಯಲ್ಲಿದ್ದಾರೆ.

 ನಾಗ ಚೈತನ್ಯ ಜೀವನದಲ್ಲಿ ಸಮಂತಾ ಇದ್ದಾಗ.. ಶೋಭಿತಾ ಇಬ್ಬರಿಗೂ ಸ್ನೇಹಿತೆಯಾಗಿದ್ದಳು. ಅಷ್ಟೇ ಅಲ್ಲ ಇವರಿಬ್ಬರ ಕಾಂಬಿನೇಷನ್ ನಲ್ಲಿ ಸಿನಿಮಾ ಕೂಡ ಬಂದಿತ್ತು ಎನ್ನಲಾಗಿದೆ. ಈ ಸಿನಿಮಾ ಯಾವುದು? ಎನ್ನುವ ಕುರಿತಾಗಿ ನಾವು ಇಂದು ನಿಮಗೆ ತಿಳಿಸಿ ಕೊಡಿಲಿದ್ದೇವೆ...

ನಾಗ ಚೈತನ್ಯ ಮತ್ತು ಸಮಂತಾ ಮದುವೆಯ ನಂತರ ಬಂದ ಸಿನಿಮಾ ಮಜಿಲಿ.  ಈ ಭಾವನಾತ್ಮಕ ಸಿನಿಮಾದಲ್ಲಿ ನಾಗ ಚೈತನ್ಯ ಮೊದಲು ಬೇರೊಬ್ಬ ಹುಡುಗಿಯನ್ನು ಪ್ರೀತಿಸುತ್ತಾನೆ. ದಿವ್ವಂಶ ಕೌಶಿಕ್ ಈ ಪಾತ್ರವನ್ನು ನಿರ್ವಹಿಸಿದ್ದಾರೆ. ಆದರೆ ಶೋಭಿತಾ ಈ ಪಾತ್ರಕ್ಕೆ ಮೊದಲು ನಟಿಸಿದ್ದರು. ಅಷ್ಟೇ ಅಲ್ಲ ಕೆಲ ದಿನಗಳ ಕಾಲ ಶೂಟಿಂಗ್ ಕೂಡ ಮಾಡಿದ್ದಾರೆ. ಆದರೆ ಕೆಲವು ದಿನಗಳ ಶೂಟಿಂಗ್ ನಂತರ ಸೋಭಿತಾ ಸಿನಿಮಾದಿಂದ ಹೊರಬಿದ್ದಿದ್ದಾರಂತೆ. ನಂತರ ಈ ಪಾತ್ರಕ್ಕೆ ದಿವ್ಯಾಂಶಾ ಅವರನ್ನು ತೆಗೆದುಕೊಳ್ಳಲಾಯಿತು.

ನಾಗ ಚೈತನ್ಯ ಅವರ ರೀಲ್ ಲೈಫ್ ರೀಲ್ ಲೈಫ್ ಅಂತೂ ಆಯಿತು. ಮಜಿಲಿ ಸಿನಿಮಾದಲ್ಲಿ ಇವರಿಬ್ಬರು ನಟಿಸಿದ್ದರೂ ಕಾಂಬಿನೇಷನ್ ಸಿನಿಮಾ ಮಿಸ್ ಆಗಿತ್ತು.  ಆದರೆ ಈ ಇಬ್ಬರು ಸ್ಟಾರ್‌ಗಳು ಒಟ್ಟಿಗೆ ಕೆಲವು ಜಾಹೀರಾತುಗಳನ್ನು ಮಾಡಿದ್ದಾರೆ ಎಂದು ತೋರುತ್ತದೆ. ಇಬ್ಬರ ನಡುವೆ ಉತ್ತಮ ಸ್ನೇಹವಿತ್ತು ಎನ್ನಲಾಗಿದೆ. 'ಮಜಿಲಿ' ಸಿನಿಮಾ ಶೂಟಿಂಗ್ ಸೆಟ್‌ನಲ್ಲೇ ಮೊದಲ ಬಾರಿಗೆ ನಾಗ ಚೈತನ್ಯ, ಶೋಭಿತಾ ಪರಿಚಯ ಆಗಿತ್ತಂತೆ  ಎನ್ನಲಾಗಿದೆ. ಆದರೆ ಈ ಕುರಿತಾಗಿ ಯಾವುದೇ ಅಧಿಕೃತ ಮಾಹಿತಿ ಇಲ್ಲ.

2021ರಲ್ಲಿ ಚೈತು, ಸಮಂತಾ ನಡುವೆ ಇರುವ ಮನಸ್ಥಾಪದಿಂದಾದಿ ಮದುವೆ ಮುರಿದುಬಿತ್ತು.. ನಂತರ ಶೋಭಿತಾಳನ್ನು ಪ್ರೀತಿಸಿ.. ಮದುವೆಯಾದರು. ಈಗ ಸಮಂತಾ ತಮ್ಮ ವೃತ್ತಿಜೀವನದ ಮೇಲೆ ಸಂಪೂರ್ಣವಾಗಿ ಗಮನಹರಿಸಿದ್ದಾರೆ. ಬಾಲಿವುಡ್‌ನಲ್ಲಿ ಸತತ ಅವಕಾಶಗಳನ್ನು ಪಡೆಯುತ್ತಿರುವ  ಸಮಂತಾ ಸದ್ಯ ಟಾಲಿವುಡ್‌ನಲ್ಲಿ ಯಾವುದೇ ಸಿನಿಮಾ ಮಾಡುತ್ತಿಲ್ಲ. ಒಂದೂವರೆ ವರ್ಷಕ್ಕೂ ಹೆಚ್ಚು ಕಾಲ ಸಿನಿಮಾಗಳಿಗೆ ಗ್ಯಾಪ್ ಕೊಟ್ಟಿದ್ದ ಈ ಚೆಲುವೆ ಈಗ ಸಕ್ರಿಯವಾಗಿದ್ದಾರೆ. ಮದುವೆಯ ನಂತರ ಶೋಭಿತಾ  ಸಿನಿಮಾ ಮಾಡುತ್ತಾರೋ ಇಲ್ಲವೋ ಎಂಬ ಬಗ್ಗೆ ಯಾವುದೇ ಸ್ಪಷ್ಟತೆ ಸಿಕ್ಕಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net