ಕೆಲಸವಿಲ್ಲದೆ ಬದುಕುವ ಆಸೆ ಕೂಡ ಇಲ್ಲ... ಅಳುತ್ತಲೇ ಆತ್ಮಹತ್ಯೆ ಮಾಡಿಕೊಂಡ ಯುವಕ! | Suicide

Untitled design - 2025-08-08T133111.336
Published on: 

Suicide: ಮೂರು ವರ್ಷಗಳಿಂದ ಪ್ರಯತ್ನಿಸುತ್ತಿದ್ದರೂ ಕೆಲಸ ಸಿಗದೆ ತೀವ್ರ ನಿರಾಶೆ ಮತ್ತು ಖಿನ್ನತೆಗೆ ಒಳಗಾಗಿದ್ದ ಯವಕನೊಬ್ಬ ರೈಲು ಹಳಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡ ಘಟನೆ ಆಂಧ್ರಪ್ರದೇಶ ಪೆಲ್ನಾಡು ಜಿಲ್ಲೆಯಲ್ಲಿ ಗುರವಾರ ನಡೆದಿದೆ.

ಪೆಡಗಾರ್ಲಪಾಡು ಗ್ರಾಮದ ಶ್ರೀನಿವಾಸ ರೆಡ್ಡಿ ಅವರ ಪುತ್ರ ಬ್ರಹ್ಮ ರೆಡ್ಡಿ (25) ಮೃತ. ಬಿ.ಟೆಕ್ ಮುಗಿಸಿದ ಬ್ರಹ್ಮ ರೆಡ್ಡಿ ಹೈದರಾಬಾದ್‌ನಲ್ಲಿದ್ದು ಉದ್ಯೋಗ ಹುಡುಕುತ್ತಿದ್ದಾನೆ. ಮೂರು ವರ್ಷಗಳಿಂದ ಪ್ರಯತ್ನಿಸುತ್ತಿದ್ದರೂ ಕೆಲಸ ಸಿಗದೆ ತೀವ್ರ ನಿರಾಶೆ ಮತ್ತು ಖಿನ್ನತೆಗೆ ಒಳಗಾದ ಹಿನ್ನೆಲೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ನೇಣಿಗೂ ಪ್ರಯತ್ನ!

ಬುಧವಾರ, ಅವನು ತನ್ನ ಹೆತ್ತವರಿಗೆ ಕರೆ ಮಾಡಿ, ಕೆಲಸ ಸಿಗುತ್ತಿಲ್ಲ, ಹೀಗಾಗಿ, ಬದುಕಲು ಸಾಧ್ಯವಿಲ್ಲ.ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಹೇಳಿ ನೇಣು ಹಾಕಿಕೊಂಡಿದ್ದಾನೆ. ಅವನ ಕುಟುಂಬ ಸದಸ್ಯರು ಅವನನ್ನು ಸಮಾಧಾನಪಡಿಸಲು ಪಡಿಸಿದ್ದಾರೆ. ಆದರೆ, ಅದು ಫಲ ನೀಡಲಿಲ್ಲ. ನಂತರ, ಬ್ರಹ್ಮ ರೆಡ್ಡಿ ಅಳುತ್ತಲೇ ಹೈದರಾಬಾದ್‌ನ ಲಿಂಗಂಪಲ್ಲಿ ಬಳಿ ಹೋಗಿ ರೈಲಿನ ಕೆಳಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.(ಏಜೆನ್ಸೀಸ್​)