ಒಬ್ಬಳೇ ಯುವತಿಯನ್ನು ಮದುವೆಯಾಗಿದ್ದ ಸಹೋದರರು: ವಿವಾಹದ ಬಗ್ಗೆ ಕೊನೆಗೂ ಸ್ಪಷ್ಟನೆ ಕೊಟ್ಟ Brothers!

Untitled design - 2025-08-07T120608.100
Published on

Brothers: ಭಾರತವು ಶ್ರೀಮಂತ ಪದ್ಧತಿಗಳು ಮತ್ತು ವೈವಿಧ್ಯಮಯ ವಿವಾಹ ಸಂಪ್ರದಾಯಗಳಿಗೆ ಹೆಸರುವಾಸಿಯಾಗಿದೆ. ಈ ಸಂಪ್ರದಾಯಗಳು ಪ್ರದೇಶ, ಧರ್ಮ ಮತ್ತು ಸಮುದಾಯದಿಂದ ಬದಲಾಗುತ್ತವೆ. ಇತ್ತೀಚೆಗೆ, ಹಿಮಾಚಲ ಪ್ರದೇಶದಲ್ಲಿ ಬಹುಪತ್ನಿತ್ವದ ಪ್ರಾಚೀನ ಸಂಪ್ರದಾಯವು ಎಲ್ಲರ ಗಮನ ಸೆಳೆದಿದೆ. ಇತ್ತೀಚಿಗೆ ಇಬ್ಬರು ಸಹೋದರರು ಒಂದೇ ವೇದಿಕೆಯಲ್ಲಿ ಒಂದೇ ಸಮಯದಲ್ಲಿ ಒಂದೇ ಮಹಿಳೆಯನ್ನು ವಿವಾಹವಾದರು. ಇದರ ವೀಡಿಯೊ ಇಂಟರ್ನೆಟ್‌ನಲ್ಲಿ ವೈರಲ್ ಆಗುದ್ದು, ದೇಶ ವಿದೇಶದಲ್ಲಿ ಈ ವಿವಾಹ ಸದ್ದು ಮಾಡಿತ್ತು. ಇದೀಗ ಈ ಮದುವೆಯ ಬಗ್ಗೆ ಸಹೋದರು ಮೌನ ಮುರಿದಿದ್ದಾರೆ.

ಸಿರ್ಮೌರ್ ಜಿಲ್ಲೆಯ ಹಟ್ಟಿ ಬುಡಕಟ್ಟಿನ ಪ್ರದೀಪ್ ನೇಗಿ ಮತ್ತು ಕಪಿಲ್ ನೇಗಿ ಎಂಬ ಇಬ್ಬರು ಸಹೋದರರು ಕುನ್ಹತ್ ಗ್ರಾಮದ ಸುನೀತಾ ಅವರನ್ನು ಒಂದೇ ಸಮಯದಲ್ಲಿ ಒಂದೇ ವೇದಿಕೆಯಲ್ಲಿ ವಿವಾಹವಾದರು. ಹಟ್ಟಿ ಜನರಲ್ಲಿ ಈ ಸಂಪ್ರದಾಯವನ್ನು ಜೋಡಿ ಧಾರಣ ಅಥವಾ ದ್ರೌಪದಿ ಪ್ರಥ ಎಂದು ಕರೆಯಲಾಗುತ್ತದೆ. ಈ ಸಂಪ್ರದಾಯದಲ್ಲಿ, ಸಹೋದರರು ಒಂದೇ ಹೆಂಡತಿಯನ್ನು ಹಂಚಿಕೊಳ್ಳುತ್ತಾರೆ ಪದ್ಧತಿ ಇದೆ.

ಕಪಿಲ್ ನೇಗಿ ಮತ್ತು ಪ್ರದೀಪ್ ಹೇಳಿದ್ದೇನು?

ಕೆಲವು ರಾಜ್ಯಗಳಲ್ಲಿ ಬಲವಂತದ ವಿವಾಹಗಳಿಗಿಂತ ಭಿನ್ನವಾಗಿ, ನಮ್ಮ ವಿವಾಹವು ಒಪ್ಪಿಗೆಯಿಂದ ಕೂಡಿತ್ತು. ನಾನು- ನನ್ನ ಸಹೋದರ ಮತ್ತು ವಧು ಇಬ್ಬರೂ ಈ ವ್ಯವಸ್ಥೆಗೆ ಸಮ್ಮತಿಸಿದ್ದಾರೆ ಮತ್ತು ಅವರ ಕುಟುಂಬವು ಈ ಒಕ್ಕೂಟವನ್ನು ಸಂಪೂರ್ಣವಾಗಿ ಬೆಂಬಲಿಸಿದೆ. ಹೀಗಾಗಿ, "ಕೆಲವರು ಸಾಮಾಜಿಕ ಮಾಧ್ಯಮದಲ್ಲಿ ನಮ್ಮನ್ನು ನಿಂದಿಸುತ್ತಿದ್ದಾರೆ, ಆದರೆ ಅದು ನನಗೆ ಮುಖ್ಯವಲ್ಲ" ಎಂದು ಪ್ರದೀಪ್ ಅವರ ಸಹೋದರ ಕಪಿಲ್ ನೇಗಿ ಸ್ಪಷ್ಟಪಡಿಸಿದ್ದಾರೆ.

ನಮ್ಮ ಸಂಸ್ಕೃತಿ ಮತ್ತು ಪದ್ಧತಿಗಳನ್ನು ನಾನು ಪ್ರಚಾರ ಮಾಡುವುದನ್ನು ಮುಂದುವರಿಸುತ್ತೇನೆ. ನಮ್ಮ ಸಂಪ್ರದಾಯಗಳ ಬಗ್ಗೆ ಏನೂ ತಿಳಿದಿಲ್ಲದ ಜನರು ಸಹ ತಮ್ಮ ಅಭಿಪ್ರಾಯವನ್ನು ನೀಡಲು ಪ್ರಯತ್ನಿಸುತ್ತಿದ್ದಾರೆ. ಈ ಮದುವೆ ನಮ್ಮೆಲ್ಲರ ಒಪ್ಪಿಗೆಯೊಂದಿಗೆ ನಡೆದಿದೆ ಮತ್ತು ನಮ್ಮ ಕುಟುಂಬ ಮತ್ತು ಸಮಾಜ ಎರಡೂ ಸಂತೋಷವಾಗಿದೆ ಎಂದಿದ್ದಾರೆ.

ತಾನು ಯಾವುದೇ ತಪ್ಪು ಮಾಡಿಲ್ಲ ಮತ್ತು ತನ್ನ ಸಾಂಸ್ಕೃತಿಕ ಮೌಲ್ಯಗಳನ್ನು ಎತ್ತಿಹಿಡಿಯಲು ಈ ಮದುವೆಯನ್ನು ಆರಿಸಿಕೊಂಡಿದ್ದೇನೆ. ಈ ಮದುವೆಯ ಉದ್ದೇಶ ಒಟ್ಟಿಗೆ ಇರುವುದು ಮತ್ತು ಪರಸ್ಪರ ಪ್ರೀತಿಯನ್ನು ಕಾಪಾಡಿಕೊಳ್ಳುವುದು. ಜನರು ನಕಾರಾತ್ಮಕ ಟೀಕೆಗಳನ್ನು ಮಾಡದಂತೆ ನಾವು ವಿನಂತಿಸುತ್ತೇವೆ, ನಮಗೆ ನಮ್ಮದೇ ಆದ ಜೀವನವಿದೆ ಮತ್ತು ನಾವು ಅವುಗಳಲ್ಲಿ ಸಂತೋಷವಾಗಿದ್ದೇವೆ" ಎಂದು ಇಬ್ಬರು ಸಹೋದರು ಹೇಳಿದರು.

ಕಪಿಲ್ ನೇಗಿ ಹೇಳಿದ್ದೇನು?

"ನಾವು ಸುದ್ದಿಯಲ್ಲಿರಲು ಮದುವೆಯಾಗಲಿಲ್ಲ. ಅನೇಕ ಕುಟುಂಬಗಳಲ್ಲಿ, ಇಬ್ಬರು ಸಹೋದರರು ಒಂದೇ ಮಹಿಳೆಯನ್ನು ಮದುವೆಯಾಗುತ್ತಾರೆ, ಆದರೆ ನಮ್ಮ ಮದುವೆ ಮಾಧ್ಯಮಗಳಲ್ಲಿ ವರದಿಯಾದ ನಂತರವೇ ಚರ್ಚೆಯ ವಿಷಯವಾಯಿತು" ಎಂದು ಕಪಿಲ್ ನೇಗಿ ಹೇಳಿದರು.

ಎರಡೂ ಕುಟುಂಬಗಳು ಮತ್ತು ಸ್ಥಳೀಯ ಸಮಾಜದ ಒಪ್ಪಿಗೆಯೊಂದಿಗೆ ನಡೆದ ಈ ವಿವಾಹವು ಜುಲೈ 12 ರಿಂದ 14 ರ ನಡುವೆ ನಡೆಯಿತು. ಶಿಲೈ ಗ್ರಾಮದ ತಿಂಡೋ ಕುಟುಂಬದ ನೇಗಿ ಸಹೋದರರು ಕುನ್ಹಾಟ್ ಗ್ರಾಮದ ಸುನೀತಾ ಅವರನ್ನು ಪೂರ್ಣ ವಿಧಿವಿಧಾನಗಳನ್ನು ಅನುಸರಿಸಿ ವಿವಾಹವಾದರು.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net