ಮಹದೇಶ್ವರ ಬೆಟ್ಟದ ಗೋಪುರ ಏರಿ ಯುವಕ ಆತ್ಮಹತ್ಯೆ ಯತ್ನ

12 HANUR 7
ಮಲೆಮಹದೇಶ್ವರ ಬೆಟ್ಟದ ಮಾದಪ್ಪನ ದೇಗುಲದಲ್ಲಿ ಗೋಪುರ ಏರುತ್ತಿದ್ದ
Published on

ಹನೂರು: ತಾಲೂಕಿನ ಪ್ರಸಿದ್ಧ ಧಾರ್ಮಿಕ ಯಾತ್ರಾಸ್ಥಳ ಮಲೆಮಹದೇಶ್ವರ ಬೆಟ್ಟದ ಮಾದಪ್ಪನ ದೇಗುಲದಲ್ಲಿ ಶನಿವಾರ ಬೆಳಗ್ಗಿನ ಜಾವ ಯುವಕಬ್ಬ ಗೋಪುರವನ್ನೇರಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಆತಂಕ ಸೃಷ್ಟಿಸಿ ಹುಚ್ಚಾಟ ಮೆರೆದಿದ್ದಾನೆ.

ಎಚ್.ಡಿ ಕೋಟೆಯ ಮೃತ್ಯುಂಜಯ ಗೋಪುರ ಏರಿದವನು. ಈತ ಪಂಚೆಯನ್ನು ಹೊರತುಪಡಿಸಿ ಮೈಮೇಲೆ ಯಾವುದೇ ಬಟ್ಟೆಯನ್ನು ಧರಿಸಿರಲಿಲ್ಲ. ಮೇಲ್ನೋಟಕ್ಕೆ ಮಾನಸಿಕ ಅಸ್ವಸ್ಥನಂತೆ ಕಂಡುಬಂದಿದ್ದು, ನಸುಕಿನ 3 ಗಂಟೆ ಸುಮಾರಿನಲ್ಲಿ ದೇಗುಲದ ಗೋಪುರವನ್ನು ಏರುತ್ತಿದ್ದ. ಇದನ್ನು ಗಮನಿಸಿದ ಭಕ್ತರು ಕೆಳಗಿಳಿಯುವಂತೆ ಮನವಿ ಮಾಡಿದರು. ಆದರೆ ಈತ ಹುಚ್ಚಾಟ ಪ್ರದರ್ಶಿಸಿ ಗೋಪುರವನ್ನು ಏರುತ್ತಲೇ ಇದ್ದ. ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದಾಗ ಸ್ಥಳಕ್ಕಾಗಮಿಸಿದ ಇನ್‌ಸ್ಪೆೆಕ್ಟರ್ ಜಗದೀಶ್ ಹಾಗೂ ಸಿಬ್ಬಂದಿ ಭಕ್ತರ ಸಹಕಾರ ಪಡೆದು ಕೆಳಗಿಳಿಸಿದರು.

ಆತ್ಮಹತ್ಯೆ ಮಾಡಿಕೊಳ್ಳುವ ಸಲುವಾಗಿ ಗೋಪುರ ಏರಿದ್ದಾಗಿ ಯುವಕ ತಿಳಿಸಿದ್ದಾನೆ. ಬಳಿಕ ಇನ್‌ಸ್ಪೆಕ್ಟರ್ ಜಗದೀಶ್ ಅವರು ಮೃತ್ಯುಂಜಯನಿಗೆ ಟೀ ಶರ್ಟ್ ಕೊಡಿಸಿ ಬಸ್ ಚಾರ್ಜಿಗೂ ಹಣ ನೀಡಿ ಊರಿಗೆ ಕಳುಹಿಸಿಕೊಟ್ಟರು. ಗೋಪುರ ಏರುವ ವೇಳೆ ದೇಗುಲದ ಮುಂಭಾಗದಲ್ಲಿ ನೆರೆದಿದ್ದ ಭಕ್ತರಲ್ಲಿ ಕೆಲಕಾಲ ಆತಂಕ ಸೃಷ್ಟಿಯಾಗಿತ್ತು. ಕೆಲ ಭಕ್ತರು ಈತನ ಕಾರ್ಯವೈಖರಿಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. ಗೋಪುರ ಏರುತ್ತಿದ್ದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರಿಂದಲೂ ಆಕ್ಷೇಪ ವ್ಯಕ್ತವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net