

ವಾಷಿಂಗ್ಟನ್: 55 ವರ್ಷದ ಆ ತಂದೆಗೆ ಕುಸ್ತಿ ಆಟದ ಭಾರೀ ರುಚಿ ಹತ್ತಿತ್ತು. ಕುಡಿದ ಅಮಲಿನಲ್ಲಿ ತನ್ನ ಬಾಲಾಪರಾಧಿ ಮಗನನ್ನು ಕುಸ್ತಿಗಾಗಿ ಪಂಥಾಹ್ವಾನ ನೀಡುತ್ತಾನೆ.
ಆರಂಭದಲ್ಲಿ ತೀವ್ರ ಸ್ಪರ್ಧಾತ್ಮಕವಾಗಿ ನಡೆದ ಪಂದ್ಯದಲ್ಲಿ ಕ್ರಮೇಣ ತಂದೆ ಪದೆ ಪದೆ ಸೋಲುತ್ತ ಬರುತ್ತಾನೆ. ಅದೊಮ್ಮೆ ಸೋಲು ಸಹಿಸದ ಆತ ಮನೆ ಛಾವಣಿಗೆ ಎರಡು ಗುಂಡು ಹೊಡೆದು ತನ್ನ ಸಿಟ್ಟನ್ನು ಹೊರಹಾಕುತ್ತಾನೆ. ಅದೃಷ್ಟವಶಾತ್ ಸಮಯಕ್ಕೆ ಸರಿಯಾಗಿ ಸ್ಥಳಕ್ಕೆ ಪೊಲೀಸರ ಆಗಮನದಿಂದಾಗಿ ಅಲ್ಲಿ ಮುಂದಾಗಬಹುದಾಗಿದ್ದ ಸಾವು ನೋವಿನಂತಹ ಅನಾಹುತ ತಪ್ಪುತ್ತದೆ. ಇದು ಯಾವುದೋ ಸಿನೆಮಾದ ದೃಶ್ಯವಲ್ಲ. ನೈಜ ಘಟನೆಯಷ್ಟೇ.
ಕೆಂಟುಕಿಯ 55 ವರ್ಷದ ಕರ್ಟಿಸ್ ಝಿಮರ್ಮನ್ ಕುಡಿದ ಅಮಲಿನಲ್ಲಿ ತನ್ನ ಬಾಲಾಪರಾಧಿ ಮಗನಿಗೆ ಕುಸ್ತಿ ಸ್ಪರ್ಧೆಗೆ ಸವಾಲು ಹಾಕಿದ್ದಾನೆಂದು ವರದಿಯಾಗಿದೆ ತಂದೆ -ಮಗನ ನಡುವಿನ ಕುಸ್ತಿ ಪಂದ್ಯವು ತುಂಬಾ ಸ್ಪರ್ಧಾತ್ಮಕ ಮತ್ತು ತೀವ್ರವಾಗಿ ಹೊರಹೊಮ್ಮಿತ್ತು,
ಕುಸ್ತಿ ಸ್ಪರ್ಧೆಯಲ್ಲಿ ಝಿಮ್ಮರ್ಮನ್ ಅನೇಕ ಬಾರಿ ಸೋತಾಗ, ಆಕ್ರೋಶಗೊಂಡು ಮಗನೊಂದಿಗೆ ಜಗಳಕ್ಕಿಳಿದ. ಪರಿಸ್ಥಿತಿ ಕೈ ಕೈ ಮಿಲಾಯಿಸುವ ಮಟ್ಟಿಗೇರಿತು ಎಂದು ಬೂನ್ ಕೌಂಟಿ ಶೆರಿಫ್ ಇಲಾಖೆ ಫೇಸ್ಬುಕ್ನಲ್ಲಿ ಬರೆದುಕೊಂಡಿದೆ. ಮಗ ಮೇಲಕ್ಕೆ ಹೋಗುತ್ತಿದ್ದಾಗ ಝಿಮ್ಮರ್ಮನ್ ಬಂದೂಕಿನಿಂದ ಮನೆಯ ಛಾವಣಿಗೆ ಎರಡು ಗುಂಡು ಹಾರಿಸಿದ.
ಕುಸ್ತಿಯಲ್ಲಿ ಉಂಟಾದ ಸೋಲು ತಂದೆಯನ್ನು ಕೆರಳಿಸಿತು ಮತ್ತು ಮಗನೊಂದಿಗೆ ವಾಗ್ವಾದಕ್ಕಿಳಿಯಲು ಕಾರಣವಾಯಿತು ಎಂದು ಹೇಳಿಕೆಯಲ್ಲಿ ಸೇರಿಸಲಾಗಿದೆ.
ಪೊಲೀಸರು ಬಂದು, ಮನೆಯಿಂದ ಹೊರಬರಲು ಝಿಮ್ಮರ್ಮನ್ಗೆ ತಿಳಿಸಿದಾಗ ಅದಕ್ಕೆ ಆತ ನಿರಾಕರಿಸಿದ ಕಾರಣ 8 ಗಂಟೆಗೂ ಹೆಚ್ಚು ಕಾಲ ಬಿಕ್ಕಟ್ಟಿನ ವಾತಾವರಣ ನಿರ್ಮಾಣವಾಗಿತ್ತು. ನಂತರ ಯಾವುದೇ ವಿರೋಧ ವ್ಯಕ್ತಪಡಿಸದೆ ಆತ ಶರಣಾದ.
"ಬಂಧನಕ್ಕೊಳಗಾದ ನಂತರ, ಝಿಮ್ಮರ್ಮನ್ನನ್ನು ಫ್ಲಾರೆನ್ಸ್ನ ಸೇಂಟ್ ಎಲಿಜಬೆತ್ಗೆ ವಿಚಾರಣೆಗೆ ಕರೆದೊಯ್ಯಲಾಯಿತು ಎಂದು ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.