ಕಲೆಗಾರನ ಕೈಚಳಕದಿಂದ ಮೂಡಿಬಂದ ತಾಯಿ-ಮಗನ ಅದ್ಭುತ ಚಿತ್ರ; 'ಕಿಚ್ಚ'ನ ಮಡಿಲಲ್ಲಿ ಅಮ್ಮ‌| kiccha

sudeep
Published on

ಬೆಂಗಳೂರು ; ನಟ ಕಿಚ್ಚ ಸುದೀಪ್​ಗಾಗಿ ಅಭಿಮಾನಿಯೊಬ್ಬರು ಪೆನ್ಸಿಲ್‌ನಲ್ಲಿ ತಾಯಿ ಸರೋಜಾ ಸಂಜೀವ್‌ ಹಾಗೂ ಸುದೀಪ್​ ಇರುವಂತಹ ಚಿತ್ರವನ್ನು ಬಿಡಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಇದೇ ಸೆಪ್ಟೆಂಬರ್ 2ರಂದು ಕಿಚ್ಚ ಸುದೀಪ್‌ ಅವರ ಹುಟ್ಟುಹಬ್ಬವಿತ್ತು. ಈ ಹಿನ್ನೆಲೆ ಕಲೆಗಾರ ಭರತ್ ಎಂಬುವವರು ಈ ಅದ್ಭುತ ಚಿತ್ರವನ್ನು ರಚಿಸಿದ್ದರು. ಇನ್ನೂ ಈ ಅಮ್ಮ-ಮಗನ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿತ್ತು. ಇದೀಗ ಇದು ನಟ ಕಿಚ್ಚ ಸುದೀಪ್​ ಅವರ ಗಮನಕ್ಕೂ ಬಂದಿದೆ. ಇದನ್ನೂ ನೋಡಿದ ಕಿಚ್ಚ, ಅಭಿಮಾನಿಯ ಕಲೆಗೆ ರೀ ಟ್ವೀಟ್‌ ಮಾಡುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

(ಏಜೆನ್ಸೀಸ್)

ಇನ್ನೂ ಭರತ್​ ತನ್ನ ವಿಡಿಯೋದಲ್ಲಿ, ಹಾಳೆಯ ಮೇಲೆ ಪೆನ್ಸಿಲ್‌ನಿಂದ ತಾಯಿ ಸರೋಜಾ ಸಂಜೀವ್‌ ಹಾಗೂ ನಟ ಸುದೀಪ್‌ ಒಟ್ಟಿಗೆ ಇರುವ ಚಿತ್ರವನ್ನು ಬಿಡಿಸಿದ್ದಾರೆ. ಕಿಚ್ಚ ಪುಸ್ತಕವನ್ನು ಓದುತ್ತಿರುವಾಗ, ಅಮ್ಮ ಕಿಚ್ಚನ ತೊಡೆ ಮೇಲೆ ಮಲಗಿಕೊಂಡಿರೋ ಹಾಗೇ ರೇಖಾಚಿತ್ರ ಬಿಡಿಸಲಾಗಿತ್ತು. ಇನ್ನೂ ಈ ವಿಡಿಯೋವನ್ನು ಅಭಿಮಾನಿ ಭರತ್​ ಸೋಷಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಇದೀಗ ಈ ವಿಡಿಯೋವನ್ನು ವೀಕ್ಷಿಸಿರುವ ನಟ ಕಿಚ್ಚ ಸುದೀಪ್​, ಅಭಿಮಾನಿಯ ಶೇರ್​ ಮಾಡಿದ ವಿಡಿಯೋವನ್ನು ನಮ್ಮ ಪೇಜ್​ನಲ್ಲಿ ಮರು ಶೇರ್​ ಮಾಡುವ ಮೂಲಕ ಅಭಿಮಾನಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net