ಸೂಟ್​ಕೇಸ್​ನಲ್ಲಿ ಮಹಿಳೆಯ ಶವ ಪತ್ತೆ!

Online Betting
Published on

ಚೆನ್ನೈ: ತಮಿಳುನಾಡಿನ ರಾಜಧಾನಿ ಚೆನ್ನೈನ ಐಟಿ ಕಾರಿಡಾರ್ ಬಳಿ ಸೂಟ್ ಕೇಸ್ ನಲ್ಲಿ ಮಹಿಳೆಯ ಶವ ಪತ್ತೆಯಾಗಿದೆ. ಇದು ಸಂಚಲನ ಮೂಡಿಸುತ್ತಿದೆ.

ಗುರುವಾರ ಬೆಳಗ್ಗೆ ಐಟಿ ಕಾರಿಡಾರ್ ಬಳಿ ಸೂಟ್ ಕೇಸ್‌ನಲ್ಲಿ ಮಹಿಳೆಯ ಶವ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತ ಮಹಿಳೆಯನ್ನು ಮಾಧವರಂ ಮೂಲದ ದೀಪಾ ಅಲಿಯಾಸ್ ವೆಳ್ಳೈಯಮ್ಮಳ್ (32) ಎಂದು ಗುರುತಿಸಲಾಗಿದೆ. ಐಟಿ ಕಾರಿಡಾರ್ ಥೋರೈಪಕ್ಕಂ ಬಳಿ ಸೂಟ್‌ಕೇಸ್‌ನಲ್ಲಿ ಆಕೆಯ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಸೂಟ್​ಕೇಸ್​ನಲ್ಲಿ ಎಸೆದು ಹೋಗಲಾಗಿತ್ತು.

ಹಣದ ವಿಚಾರವಾಗಿ ಆಕೆಯ ಹತ್ಯೆಯಾಗಿರುವ ಸಾಧ್ಯತೆಯಿದೆ. ಈ ಸಂಬಂಧ ಪೊಲೀಸರು ಮಣಿಕಂದನ್‌ನನ್ನು ಬಂಧಿಸಿದ್ದಾರೆ. ಸಂತ್ರಸ್ತೆಯ ಫೋನ್​ ಟ್ರ್ಯಾಕಿಂಗ್ ಬಳಸಿ, ಆಕೆ ಸಹೋದರ ನೀಡಿದ ಮಾಹಿತಿ ಮೇರೆಗೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಆರೋಪಿ ಶಿವಗಂಗಾ ಜಿಲ್ಲೆಯ ಮಣಿಕಂದನ್ ಆಕೆಯಿಂದ ಹೆಚ್ಚಿನ ಹಣಕ್ಕಾಗಿ ಬೇಡಿಕೆ ಇಟ್ಟಿದ್ದರಿಂದ ಜಗಳ ನಡೆದು ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಿರುವುದಾಗಿ ಪೊಲೀಸರ ಪ್ರಾಥಮಿಕ ವಿಚಾರಣೆಯಿಂದ ತಿಳಿದುಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net