

ಕೆ.ಆರ್.ನಗರ : ರಾಜ್ಯದ ಜನರಿಗೆ ಉತ್ತಮ ಆಡಳಿತ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆ.ಆರ್.ನಗರ ವಿಧಾನಸಭಾ ಕ್ಷೇತ್ರದ ಶಾಸಕ ಡಿ.ರವಿಶಂಕರ್ ಗೆಲುವಿಗಾಗಿ ತಂಬಿಟ್ಟು ಆರತಿ ಹೊತ್ತು ಹರಕೆ ತೀರಿಸುವುದಾಗಿ ಗಂಧನಹಳ್ಳಿ ಗ್ರಾಮದ ಗ್ರಾಮ ದೇವತೆ ಶ್ರೀ ಹುಣಸಮ್ಮ ದೇವಿಗೆ ಹರಕೆ ಕಟ್ಟಿ ಕೊಂಡಿದ್ದ ಗಂಧನಹಳ್ಳಿ ಗ್ರಾಮದ ಜಿಲ್ಲಾ ಕುರುಬ ಸಂಘದ ನಿರ್ದೇಶಕ ಜಿ.ಎಂ.ಹೇಮಂತ್ ಪತ್ನಿ ಹರಕೆ ತೀರಿಸಿದರು.
ತುಳಿಸಿ ಅವರು ಶ್ರೀ ಹುಣಸಮ್ಮ ದೇವಿಯ ರಥೋತ್ಸವ ಹಿನ್ನೆಲೆಯಲ್ಲಿ ಶುಕ್ರವಾರ ವಿಶೇಷ ರೀತಿಯಲ್ಲಿ ಮನೆಯಂಗಳವನ್ನು ಹೂಗಳಿಂದ ಅಲಂಕರಿಸಿ, ಮನೆಗೆ ತಳಿರು ತೋರಣಗಳಿಂದ ಕಟ್ಟಿ ಬೆಳಗ್ಗೆಯಿಂದಲೇ ಉಪವಾಸ ಇದ್ದು ತಂಬಿಟ್ಟು ತಯಾರಿಸಿ ಹುಣಸಮ್ಮ ದೇವಿಗೆ ನೈವೇದ್ಯ ಮಾಡಿಸಿದರು. ಬಳಿಕ ತಂಬಿಟ್ಟು ಆರತಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕ್ಷೇತ್ರದ ಶಾಸಕ ಡಿ.ರವಿಶಂಕರ್ ಅವರ ಭಾವಚಿತ್ರವನ್ನು ಅಂಟಿಸಿಕೊಂಡು ಹುಣಸಮ್ಮ ದೇವಸ್ಥಾನದಿಂದ ಪಲ್ಲಕ್ಕಿ ಉತ್ಸವದಲ್ಲಿ ಹೊರಟ ಗ್ರಾಮದೇವತೆ ಹುಣಸಮ್ಮ ದೇವಿಯ ಮೆರವಣಿಗೆಯಲ್ಲಿ ತುಳಸಿ ಅವರು ತಂಬಿಟ್ಟು ಆರತಿ ಹೊತ್ತು ಗ್ರಾಮದ ಮುತ್ತೈದೆರೊಂದಿಗೆ ಸಾಗಿ ತಮ್ಮ ಅಭಿಮಾನ ಮೆರೆದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ತುಳಸಿ ಅವರು, ನಾಡಿನ ಜನಪ್ರಿಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಐದು ಗ್ಯಾರಂಟಿ ಯೋಜನೆಯನ್ನು ಮಹಿಳೆಯರಿಗಾಗಿ ನೀಡಿದ್ದು ರಾಜ್ಯದ ಜನತೆ ನೆಮ್ಮದಿಯಾಗಿ ಜೀವನ ನಡೆಸುತ್ತಿದ್ದಾರೆ, ಗೃಹಲಕ್ಷ್ಮಿ ಹಣದಿಂದ ಮಹಿಳೆಯರು ತಮ್ಮ ಸಾವಲಂಬಿ ಬದಕನ್ನು ಕಟ್ಟಿಕೊಳ್ಳುತ್ತಿದ್ದಾರೆ ಎಂದರು.
ಕಾಂಗ್ರೆಸ್ ಮುಖಂಡ ಗಂಧನಹಳ್ಳಿ ವೆಂಕಟೇಶ್, ಜಿಲ್ಲಾ ಕುರುಬರ ಸಂಘದ ನಿರ್ದೇಶಕ ಗಂಧನಹಳ್ಳಿ ಹೇಮಂತ್, ಮುಖಂಡರಾದ ಡೇರಿ ಜಿ.ಕೆ.ಮಹಾದೇವ್, ಬಾರ್ ಹರೀಶ್ , ಮಂಜುಅರಸ್, ಕೆಂಪರಾಜು, ಜಿ.ಡಿ.ಅರುಣಾ, ಅಭಿಮರೀಗೌಡ, ಜಿಪಿಟಿ ಬೀರೇಶ್, ಜಯರಾಜ್, ಜಿ.ಆರ್.ಹರೀಶ್ ಮೊದಲಾದವರು ಇದ್ದರು.