ಪತಿಯಿಂದ ತಿಂಗಳಿಗೆ 6 ಲಕ್ಷ ಕೇಳಿದ ಮಹಿಳೆ : ತರಾಟೆಗೆ ತೆಗೆದುಕೊಂಡ ಹೈಕೋರ್ಟ್

highcourt
Published on

ಬೆಂಗಳೂರು: ಶೂ, ಡ್ರೆಸ್, ಬಳೆ ಇತ್ಯಾದಿಗಳಿಗೆ ತಿಂಗಳಿಗೆ 15,000 ರೂ. ಮತ್ತು ಮನೆಯಲ್ಲಿ ಊಟಕ್ಕೆ 60,000 ರೂ. ಬೇಕು. ಜತೆಗೆ ಮೊಣಕಾಲು ನೋವು ಮತ್ತು ಫಿಸಿಯೋಥೆರಪಿ ಮತ್ತು ಇತರ ಔಷಧಿಗಳ ವೈದ್ಯಕೀಯ ವೆಚ್ಚಕ್ಕಾಗಿ 4-5 ಲಕ್ಷ ರೂ. ಅಗತ್ಯವಿದೆ. ತಿಂಗಳಿಗೆ 6,16,300 ಜೀವನಾಂಶ.....

ಪತಿ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿರುವ ಪತ್ನಿ, ತನಗೆ ಜೀವನಾಂಶ ಕೊಡಿಸುವಂತೆ ನ್ಯಾಯಮೂರ್ತಿಗಳಿಗೆ ಮನವಿ ಮಾಡಿದ್ದು ಹೀಗೆ.....ಮಹಿಳೆ ಪರ ವಕೀಲರ ವಾದ ಹಾಗೂ ಮಹಿಳೆಗೆ ತರಾಟೆಗೆ ತೆಗೆದುಕೊಂಡ ನ್ಯಾಯಮೂರ್ತಿಗಳ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ನ್ಯಾಯಮೂರ್ತಿ ಲಲಿತಾ ಕನ್ನೆಗಂಟಿ ಅವರ ಏಕ ಸದಸ್ಯ ಪೀಠ, ಏನಿದು ಒಬ್ಬ ವ್ಯಕ್ತಿಗೆ ಮಾಸಿಕವಾಗಿ ಇಷ್ಟು ಮೊತ್ತದ ಅನಿವಾರ್ಯತೆ ಇದೆಯೇ? ಅದು ತಿಂಗಳಿಗೆ 6,16,300 ರೂ. ಯಾರಾದರೂ ಇಷ್ಟು ಹಣ ಖರ್ಚು ಮಾಡುತ್ತಾರೆಯೇ? ಅಷ್ಟು ಹಣವನ್ನು ಖರ್ಚು ಮಾಡಲು ಬಯಸಿದರೆ ಅವಳೇ ದುಡಿದು ಸಂಪಾದಿಸಬಹುದು ಹೊರತಾಗಿ ಈ ರೀತಿಯಲ್ಲಿ ಅಲ್ಲ.

ಜತೆಗೆ ಅರ್ಜಿದಾರರ ಮಹಿಳೆ ಉದ್ದೇಶಿಸಿ, ನಿಮಗೆ ಕುಟುಂಬದ ಬೇರಾವ ಜವಾಬ್ದಾರಿ ಇಲ್ಲವೇ? ಮಕ್ಕಳನ್ನು ನೋಡಿಕೊಳಬೇಕಾಗಿಲ್ಲದೆ ಇದ್ದರೂ ಸ್ವತಃ ಖರ್ಚಿಗೆ ಈ ರೀತಿಯಲ್ಲಿ ದೊಡ್ಡ ಮೊತ್ತದ ನಿರೀಕ್ಷೆ. ದಯಮಾಡಿ ಓರ್ವ ವ್ಯಕ್ತಿಯ ಜೀವನ ನಿರ್ವಹಣೆಗೆ ಬೇಕಾಗಿರುವುದು ಇಷ್ಟೇ ಎಂದು ಹೇಳಬೇಡಿ. ನೀಡುವ ಕಾರಣವೂ ಸಮಂಜಸವಾಗಿರಬೇಕು. ಇಲ್ಲಿ ನ್ಯಾಯಾಲಯದ ಪ್ರಕ್ರಿಯೆಯ ದುರ್ಬಳಕೆ ಸ್ಪಷ್ಟವಾಗಿ ತಿಳಿದುಬರುತ್ತದೆ ಎಂದು ನ್ಯಾಯಪೀಠ ತರಾಟೆಗೆ ತೆಗೆದುಕೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net