

Harassed: ಮಹಿಳೆ ಜತೆ ಆಕ್ರಮ ಸಂಬಂಧ ಇಟ್ಟುಕೊಂಡಿದ್ದ ವ್ಯಕ್ತಿಯ ಮಗಳ ಕೊಟ್ಟು ಮದುವೆ ಮಾಡುವಂತೆ ಕಿರುಕುಳ ನೀಡುತ್ತಿದ್ದ ಪ್ರಕರಣವೊಂದು ಆಂಧ್ರದ ಗೋದಾವರಿ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಈ ಕುರಿತು ಆನಪರ್ತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆನಪರ್ತಿ ಗ್ರಾಮದ ನಿವಾಸಿ ಪಿ.ನಾಗಿರೆಡ್ಡಿ ಎಂಬಾತ ಅದೇ ಗ್ರಾಮದ ವಿಧವೆಯ ಜತೆ ಆಕ್ರಮ ಸಂಬಂಧ ಹೊಂದಿದ್ದನು. ಇತನಿಗೆ ಈ ಹಿಂದೆ ಮದುವೆಯಾಗಿತ್ತು. ಆದರೆ, ಪತ್ನಿ ಹಾಗೂ ಮಗಳು ಇತನಿಂದ ದೂರಹೋದರು. ಹೀಗಾಗಿ, ಆಕೆಯ ಜತೆ ಆಕ್ರಮ ಸಂಬಂಧ ಏರ್ಪಟ್ಟಾಗ ಗ್ರಾಮದ ಜನರು ಕೂಡ ಸುಮ್ಮನಾಗಿದ್ದರು. ಕಾಲ ಕಳೆದಂತೆ ಇತನ ವರ್ತನೆ ಬದಲಾಗಿದೆ. ಈ ಆಕೆಯ ಜತೆ ಮಂಚ ಹಂಚಿಕೊಂಡಿದ್ದ ಇತ. ಇದೀಗ, ಆಕೆಯ ಮಗಳ ಮೇಲೆ ಕಣ್ಣು ಹಾಕಿದ್ದಾನೆ. ಅಲ್ಲದೆ, ಮಗಳ ಕೊಟ್ಟು ಮದುವೆ ಮಾಡುವಂತೆ ಕಿರುಕುಳ ನೀಡುತ್ತಿದ್ದಾನೆ. ದಿನ ನಿತ್ಯ ತಾಯಿ-ಮಗಳ ಮೇಲೆ ಪದೇಪದೆ ಹಲ್ಲೆ ಮಾಡುತ್ತಿದ್ದಾನೆ.
ಪದೇ ಪದೇ ಹಲ್ಲೆ ನಡೆಸುತ್ತಿದ್ದ. ಕಿರುಕುಳ ಹೆಚ್ಚಾದಾಗ ಸಂತ್ರಸ್ತೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಆರೋಪಿ ನಾಗಿ ರೆಡ್ಡಿ ನನ್ನ ಮತ್ತು ನನ್ನ ಮಗಳ ಮೇಲೆ ಹಲ್ಲೆ ನಡೆಸಿ ತೀವ್ರವಾಗಿ ಥಳಿಸಿದ್ದಾನೆ. ಪ್ರಜ್ಞಾಹೀನಳಾಗಿದ್ದ ತನ್ನ ಮಗಳನ್ನು ಅನಪರ್ತಿ ಸರ್ಕಾರಿ ಪ್ರದೇಶ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಸಂತ್ರಸ್ತೆಯ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಯುತ್ತಿದೆ ಎಂದು ಆನಪರ್ತಿ ಪೊಲೀಸರು ತಿಳಿಸಿದ್ದಾರೆ.(ಏಜೆನ್ಸೀಸ್)