ದತ್ತು ಪಡೆದ ಬೀದಿ ನಾಯಿಗಳನ್ನು ಕೊಂದು ಅಡುಗೆ ಮಾಡಿದ ಮಹಿಳೆ!Adopts Stray Dogs

stray dogs
stray dogs
Published on

ಚೀನಾ: ( Adopts Stray Dogs ) ಚೀನಾದ ಲಿಯಾನಿಂಗ್ ಪ್ರಾಂತ್ಯದ ಜಿಕ್ಸುವಾನ್ ಎಂಬ ಮಹಿಳೆಯೊಬ್ಬರು ಆಶ್ರಯ ತಾಣಗಳಿಂದ ನಾಯಿಗಳನ್ನು ದತ್ತು ತೆಗೆದುಕೊಂಡು, ಕೊಂದು ಅಡುಗೆ ಮಾಡಿ ತಿಂದ ಆರೋಪದ ತನಿಖೆ ಎದುರಿಸುತ್ತಿದ್ದಾರೆ.

ಚೀನಾದ ಲಿಯಾನಿಂಗ್ ಪ್ರಾಂತ್ಯದ ಝಿಕ್ಸುವಾನ್ ಎಂಬ ಅಡ್ಡ ಹೆಸರಿನ ಮಹಿಳೆಯೊಬ್ಬರು ಪ್ರಾಣಿ ಪ್ರೇಮಿಯಂತೆ ನಟಿಸುವ ಮೂಲಕ ಬೀದಿ ನಾಯಿಗಳನ್ನು ರಕ್ಷಿಸುವ ಆಶ್ರಯದಿಂದ ನಾಯಿಗಳನ್ನು ದತ್ತು ಪಡೆದರು. ನಂತರ ಅವುಗಳನ್ನು ಮನೆಗೆ ತೆಗೆದುಕೊಂಡು ಹೋಗಿ ಬೇಯಿಸುತ್ತಿದ್ದರು ಎಂಬ ದೂರುಗಳು ಬಂದಿದ್ದವು.

ಚೀನಾದ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ವೀಡಿಯೊಗಳಲ್ಲಿ ಜಿಕ್ಸುವಾನ್ ನಾಯಿ ಮಾಂಸವನ್ನು ಬೇಯಿಸಿ ತನ್ನ ಮಗುವಿಗೆ ತಿನ್ನಿಸುತ್ತಿರುವುದನ್ನು ತೋರಿಸಲಾಗಿದೆ. ಒಂದು ಪೋಸ್ಟ್‌ನಲ್ಲಿ ಅವರು, "ಮಳೆಗಾಲದ ಪಾನೀಯದೊಂದಿಗೆ ನಾಯಿ ಮಾಂಸ ರುಚಿಕರವಾಗಿರುತ್ತದೆ" ಎಂಬಂತಹ ಟ್ಯಾಗ್‌ಗಳೊಂದಿಗೆ ಪೋಸ್ಟ್‌ಗಳು ಇರುವುದು ದೃಢಪಟ್ಟಿದೆ. ಘಟನೆ ಬೆಳಕಿಗೆ ಬಂದ ಕೂಡಲೇ, ಅಧಿಕಾರಿಗಳು ನಾಯಿ ಮಾಂಸವನ್ನು ವಶಪಡಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಜನರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಜಿಕ್ಸುವಾನ್ ನಾಯಿ ಮಾಂಸವನ್ನು ಬೇಯಿಸಿ ತಿಂದಿದ್ದನ್ನು ಅಧಿಕಾರಿಗಳು ದೃಢಪಡಿಸಿದ್ದಾರೆ. ಸಾರ್ವಜನಿಕ ಕಣ್ಗಾವಲು ಇಲಾಖೆಯು ಮಾಂಸವನ್ನು ಮುಟ್ಟುಗೋಲು ಹಾಕಿಕೊಂಡಿದೆ. ಅವರ ಸಾಮಾಜಿಕ ಮಾಧ್ಯಮ ಖಾತೆಯನ್ನು ಪ್ರಸ್ತುತ ನಿಷ್ಕ್ರಿಯಗೊಳಿಸಲಾಗಿದೆ ಮತ್ತು ಎಲ್ಲಾ ಪೋಸ್ಟ್‌ಗಳನ್ನು ಮರೆಮಾಡಲಾಗಿದೆ.

ಈ ಘಟನೆಗೆ ಸಂಬಂಧಿಸಿದ ವಿಷಯಗಳು ವೀಬೊದಂತಹ ಸಾಮಾಜಿಕ ಮಾಧ್ಯಮಗಳಲ್ಲಿ 10 ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆಗಳನ್ನು ಪಡೆದಿವೆ. "ಆ ನಾಯಿಗಳು ತಮಗೆ ಪ್ರೀತಿಯ ಮನೆ ಸಿಕ್ಕಿದೆ ಎಂದು ಭಾವಿಸಿದ್ದವು. ಆದರೆ ಅದು ನೇರವಾಗಿ ನರಕಕ್ಕೆ ಹೋಯಿತು" ಎಂದು ಕಾಮೆಂಟ್​​ ಮಾಡುವ ಮೂಕವಾಗಿ ಕಿಡಿಕಾರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net