ನಾಯಿ ವಿಚಾರಕ್ಕೆ ಮಹಿಳೆ ಮೇಲೆ ಹಲ್ಲೆ: ಹಲ್ಲೆಯ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ

Crime Logo
Published on

ಬೆಂಗಳೂರು: ನಾಯಿ ವಿಚಾರಕ್ಕೆ ಮನೆ ಮಾಲೀಕರು ಮತ್ತು ಬಾಡಿಗೆದಾರರ ನಡುವೆ ಜಗಳ ನಡೆದಿದ್ದು, ಈ ವೇಳೆ ಮಹಿಳೆ ಮೇಲೆ ಹಲ್ಲೆ ನಡೆಸಿರುವ ಆರೋಪ ಕೇಳಿ ಬಂದಿದೆ. ಈ ಸಂಬಂಧ ಜೀವನ್ ಭೀಮಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.


ಜೀವನ್ ಭೀಮಾ ನಗರದಲ್ಲಿರುವ ಅಪಾರ್ಟ್‌ಮೆಂಟ್‌ನ ್ಲಾಟ್‌ನಲ್ಲಿ ೆ.೨ ತಡರಾತ್ರಿ ಈ ಘಟನೆ ನಡೆದಿದೆ.


ಹಲ್ಲೆಗೊಳಗಾದ ಮಹಿಳೆ ಪೂಜಾ ಬೋಗ್ಯಕ್ಕೆ ಇದ್ದರು. ನಾಯಿ ಸಾಕಬಾರದು ಎಂದು ಫ್ಲಾಟ್ ಮಾಲೀಕರು ಮೊದಲೇ ಸೂಚಿಸಿದ್ದರು. ಇದಕ್ಕೆ ಬಾಡಿಗೆದಾರರು ಒಪ್ಪಿಕೊಂಡಿರಲಿಲ್ಲ. ಈ ವೇಳೆ ಮನೆ ಖಾಲಿ ಮಾಡುವಂತೆ ಮಾಲೀಕರು ಹೇಳಿದಾಗ ಇಬ್ಬರ ಮಧ್ಯೆ ಜಗಳ ನಡೆದಿದೆ. ಮಧ್ಯರಾತ್ರಿ ೧೨.೩೦ ರ ಸುಮಾರಿಗೆ ಫ್ಲಾಟ್‌ಗೆ ನುಗ್ಗಿದ ನಾಲ್ಕೈದು ಮಂದಿ ಮಹಿಳೆ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಮಹಿಳೆ ಈ ಸಂಬಂಧ ಜೀವನ್ ಭೀಮಾನಗರ ಪೊಲೀಸ್ ಠಾಣೆ ದೂರು ನೀಡಿದ್ದಾರೆ. ಮಹಿಳೆ ಮೇಲೆ ಹಲ್ಲೆ ನಡೆಸಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಇಬ್ಬರು ಮಹಿಳೆಯರು ಕೈಯಿಂದ ಹೊಡೆದಾಡಿಕೊಂಡಿದ್ದಾರೆ. ಇಬ್ಬರು ಮೆಡಿಕಲ್ ಸರ್ಟಿಫಿಕೆಟ್ ಮಾಡಿಸಿಕೊಂಡು ಬಂದು ನೀಡಿದ್ದಾರೆ. ಈ ಸಂಬಂಧ ಎನ್‌ಸಿಆರ್ ದಾಖಲು ಮಾಡಿಕೊಳ್ಳಲಾಗಿದೆ. ಕೋರ್ಟ್ ಅನುಮತಿ ಪಡೆದು ಮುಂದಿನ ಕ್ರಮ ಜರುಗಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.


ಹಣದ ವಿಚಾರಕ್ಕೆ ಹಲ್ಲೆ:
ಮಹಿಳೆ ಸೇರಿ ಇಬ್ಬರು ಪುರುಷರು ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ. ಹಲ್ಲೆಯ ವೇಳೆ ನನ್ನ ಚಿನ್ನದ ಸರ ಕಿತ್ತು ಹೋಗಿದೆ. ಈ ಸಂಬಂಧ ಭೀಮಾನಗರ ಪೊಲೀಸ್ ಠಾಣೆ ದೂರು ನೀಡಿದ್ದು, ಪೊಲೀಸರು ಎ್ಐಆರ್ ದಾಖಲಿಸದೇ ಕೇವಲ ಎನ್‌ಸಿಆರ್ ದಾಖಲಿಸಿಕೊಂಡಿದ್ದಾರೆ. ಯಾರೊಬ್ಬರನ್ನು ಬಂಧಿಸಿಲ್ಲ. ನಾಯಿಯ ವಿಚಾರಕ್ಕೆ ಮಾತ್ರವಲ್ಲದೇ ಹಣದ ವಿಚಾರಕ್ಕೆ ಮಾಲೀಕರು ಗಲಾಟೆ ಮಾಡಿದ್ದಾರೆ. ೫೦ ಸಾವಿರ ಹೆಚ್ಚಿಗೆ ಕೇಳಿದರು ನಾನು ಕೊಡಲಿಲ್ಲ, ಹೀಗಾಗಿ ಗಲಾಟೆ ತೆಗೆದು ನನ್ನ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಹಲ್ಲೆಗೊಳಗಾದ ಪೂಜಾ ಆರೋಪಿಸಿದ್ದಾರೆ.


ನನ್ನ ತಂದೆ ಮೇಲೆ ಹಲ್ಲೆ ಮಾಡಲಾಗಿದೆ:
ನಮ್ಮ ್ಲಾಟ್ ಅನ್ನು ಪೂಜಾ ಅವರಿಗೆ ಒಂದೂವರೆ ವರ್ಷಗಳ ಹಿಂದೆ ಬೋಗ್ಯಕ್ಕೆ ನೀಡಲಾಗಿತ್ತು. ಅವರು ಮನೆಯನ್ನು ಸ್ವಚ್ಛವಾಗಿ ಇಟ್ಟುಕೊಂಡಿಲ್ಲ. ಮನೆಯಲ್ಲಿ ನಾಯಿ ಸಾಕಿ ಗಲೀಜು ಮಾಡುತ್ತಿದ್ದಾರೆ. ಹೊತ್ತಿಲ್ಲದ ಹೊತ್ತಿನಲ್ಲಿ ಮನೆಗೆ ಯಾರ‌್ಯಾರೊ ಬಂದು ಹೋಗುತ್ತಾರೆ ಇದನ್ನು ಪ್ರಶ್ನಿಸಿದರೆ ಅದು ನನ್ನ ಪ್ರೈವೆಸಿ ಎಂದು ಹೇಳುತ್ತಾರೆ. ಗೇಟ್‌ನ್ನು ಮುರಿದು ನಾಯಿಯನ್ನು ಕಳುಹಿಸಿದಕ್ಕೆ ೭೨ ವರ್ಷದ ನಮ್ಮ ತಂದೆ ಮೇಲೆ ಹಲ್ಲೆ ಮಾಡಲು ಬಂದಳು. ಜತೆಗೆ ಜಾತಿ ನಿಂದನೆ ಮಾಡಿದ್ದಾರೆ. ನಿಮ್ಮ ಹಣ ವಾಪಸ್ ಕೊಡುತ್ತೇವೆ ಮನೆ ಖಾಲಿ ಮಾಡಿ ಎಂದು ಹೇಳಿದರು ಮನೆ ಖಾಲಿ ಮಾಡುತ್ತಿಲ್ಲ. ಜತೆಗೆ ನಮ್ಮ ಮೇಲೆ ಹಲ್ಲೆ ಮಾಡಿದ್ದಾಳೆ. ಇದಕ್ಕೆ ಸಂಬಂಧಿಸಿದಂತೆ ದಾಖಲೆಗಳನ್ನು ಪೊಲೀಸರಿಗೆ ನೀಡಲಾಗಿದೆ ಎಂದು ಮಾಲೀಕರಾದ ಪ್ರಮೀಳ ಆರೋಪಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net