8 ಪುರುಷನನ್ನು ಮದುವೆಯಾಗಿ ಲಕ್ಷಾಂತರ ರೂ. ವಂಚಿಸಿದ ಕಿರಾತಕಿ! ಅದೇಗೆ ಗೊತ್ತಾ?

Untitled design - 2025-08-01T181050.510
Published on

ಒಬ್ಬರಿಂದ ಒಬ್ಬರಂತೆ 8 ಜನ ಪುರುಷರನ್ನು ಮದುವೆಯಾಗಿ ಅವರಿಂದ ಲಕ್ಷಾಂತರ ರೂಪಾಯಿ ಸುಲಿಗೆ ಮಾಡಿದ ಆರೋಪದ ಮೇಲೆ ಮಹಿಳೆಯೊಬ್ಬಳನ್ನು ಮಹಾರಾಷ್ಟ್ರದ ನಾಗ್ಪುರದಲ್ಲಿ ಶುಕ್ರವಾರ ಪೊಲೀಸರು ಬಂಧಿಸಿದ್ದಾರೆ.

ಆರೋಪಿ ಸಮೀರಾ ಫಾತಿಮಾ ಎಂದ ಗುರಿತಿಸಲಾಗಿದೆ. ಈಕೆ 9ನೇ ಮದುವೆಯಾಗುತ್ತಿದ್ದಾಗ ಪೊಲೀಸರಿಗೆ ಸೆರೆ ಸಿಕ್ಕಿದ್ದಾಳೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆರೋಪಿ ವಧು ತನ್ನ ಗಂಡಂದಿರನ್ನು ಬ್ಲಾಕ್ ಮೇಲ್ ಮಾಡಿ ಹಣ ವಸೂಲಿ ಮಾಡುತ್ತಿದ್ದಳು ಎಂದು ತಿಳಿದುಬಂದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಪ್ರಾಥಮಿಕ ತನಿಖೆ ಪ್ರಕಾರ, ಸಮೀರಾ ಫಾತಿಮಾ ತನ್ನ ಬೇರೆ ಬೇರೆ ಗಂಡಂದಿರಿಂದ ಹಣ ಸುಲಿಗೆ ಮಾಡಲು ಒಂದು ಗ್ಯಾಂಗ್ ಜೊತೆ ಕೆಲಸ ಮಾಡುತ್ತಿದ್ದಳು. ಆರೋಪಿ ಸಮೀರಾ ವಿದ್ಯಾವಂತಳಾಗಿದ್ದು, ವೃತ್ತಿಯಲ್ಲಿ ಶಿಕ್ಷಕಿ ಎಂದು ತಿಳಿದುಬಂದಿದೆ.

ವಿಶೇಷವಾಗಿ ಮುಸ್ಲಿಂ ಸಮುದಾಯದ ಶ್ರೀಮಂತ, ವಿವಾಹಿತ ಪುರುಷರನ್ನು ಗುರಿಯಾಗಿಸಿಕೊಂಡು ಈ ವಂಚನೆ ಮಾಡುತ್ತಿದ್ದಳು.

ಆಕೆಯ ಗಂಡನೊಬ್ಬ ಸಂತ್ರಸ್ತೆಯೊಬ್ಬಳಿಂದ 50 ಲಕ್ಷ ರೂಪಾಯಿ ಮತ್ತು ಇನ್ನೊಬ್ಬರಿಂದ 15 ಲಕ್ಷ ರೂಪಾಯಿಗಳನ್ನು ನಗದು ಮತ್ತು ಬ್ಯಾಂಕ್ ವರ್ಗಾವಣೆಯ ಮೂಲಕ ಸುಲಿಗೆ ಮಾಡಿದ್ದಾಳೆ ಎಂದು ಆರೋಪದ ಮೇಲೆ ದೂರು ದಾಖಲಾಗಿದೆ. ರಿಸರ್ವ್ ಬ್ಯಾಂಕಿನ ಹಿರಿಯ ಅಧಿಕಾರಿಗಳೊಂದಿಗೆ ಕೂಡ ಆಕೆ ಅದೇ ರೀತಿ ಮಾಡಿದ್ದಾರೆ ಎಂದು ಪೊಲೀಸರು ಶಂಕಿಸಿದ್ದು ತನಿಖೆ ಮುಂದುವರೆದಿದೆ.

ಸಮೀರಾ ತನ್ನ ವರರನ್ನು ಗುರುತಿಸಲು ಮತ್ತು ಆಮಿಷವೊಡ್ಡಲು ವೈವಾಹಿಕ ವೆಬ್‌ಸೈಟ್‌ಗಳು ಮತ್ತು ಫೇಸ್‌ಬುಕ್ ಅನ್ನು ಬಳಸುತ್ತಿದ್ದಳು. ತನ್ನ ಜೀವನದ ಭಾವನಾತ್ಮಕ ಕಥೆಗಳನ್ನು ಹಂಚಿಕೊಳ್ಳುತ್ತಿದ್ದಳು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net