ಮುದ್ದಾದ 3 ಹೆಣ್ಣುಮಕ್ಕಳಿದ್ದರೂ ಗಂಡನ ಮನೇಲಿ ಅಸಮಾಧಾನ: ದಿಕ್ಕುತೋಚದ ಪತ್ನಿ ಮಕ್ಕಳನ್ನ ಬಾವಿಗೆ ಎಸೆದು ಆತ್ಮಹತ್ಯೆ

well
Published on

ಕಲಬುರಗಿ: ಗಂಡನ ಮನೆಯವರಿಗೆ ಗಂಡು ಮಗುವಿನ ಮೇಲಿದ್ದ ಮೋಹಕ್ಕೆ ಮನೆಯ ಸೊಸೆ ತನ್ನ ಮೂವರು ಹೆಣ್ಣುಮಕ್ಕಳೊಂದಿಗೆ ಬಾವಿಗೆ ಹಾರಿ ದುರಂತ ಅಂತ್ಯ ಕಂಡಿದ್ದಾಳೆ. ಮೂರು ಮಕ್ಕಳ ಪೈಕಿ ಒಂದು ಮಗು ಅದೃಷ್ಟವಶಾತ್​ ಬದುಕುಳಿದಿದೆ.

ಇಂತಹ ಅಮಾನವೀಯ ಘಟನೆ ಕಲಬುರಗಿ ಜಿಲ್ಲೆ ಆಳಂದ ತಾಲೂಕಿನ ಮಾಡ್ಯಾಳ ಗ್ರಾಮದಲ್ಲಿ ಭಾನುವಾರ ಸಂಭವಿಸಿದೆ. ಲಕ್ಷ್ಮೀ ಏಳಕೆ(28),‌ ಮಕ್ಕಳಾದ ಸಾವಿತ್ರಿ (2 ವರ್ಷ) ಮತ್ತು ಗೌರಮ್ಮ (6 ತಿಂಗಳು) ಮೃತ ದುರ್ದೈವಿಗಳು. 4 ವರ್ಷದ ಬಾಲಕಿ ಈಶ್ವರಿಯನ್ನ ಸ್ಥಳೀಯರು ರಕ್ಷಣೆ ಮಾಡಿದ್ದಾರೆ.

ಲಕ್ಷ್ಮೀಗೆ ಮೂವರು ಹೆಣ್ಣು ಮಕ್ಕಳಾಗಿದ್ದಕ್ಕೆ ಗಂಡನ ಮನೆಯವರು ಗಂಡು ಮಗು ಆಗಲಿಲ್ಲ ಎಂದು ನಿತ್ಯ ಕಿರುಕುಳ ಕೊಡುತ್ತಿದ್ದರಂತೆ. ಇದರಿಂದ ಬೇಸತ್ತ ಲಕ್ಷ್ಮೀ, ಗ್ರಾಮ ಹೊರವಲಯದ ಜಮೀನಿನೊಂದರ ಬಾವಿಗೆ ತನ್ನ ಮೂವರು ಮಕ್ಕಳೊಂದಿಗೆ ಜಿಗಿದಿದ್ದಾರೆ. ಕೂಡಲೇ ಸ್ಥಳೀಯರು ಅವರ ರಕ್ಷಣೆಗೆ ಮುಂದಾಗಿದ್ದು, ಓರ್ವ ಬಾಲಕಿ ಮಾತ್ರ ಬದುಕುಳಿದಿದ್ದಾಳೆ. ತಾಯಿ ಜತೆ 2 ಪುಟ್ಟ ಕಂದಮ್ಮಗಳು ಕೊನೆಯುಸಿರೆಳೆದಿವೆ. ಸುದ್ದಿ ತಿಳಿಯುತ್ತಿದ್ದ ಸ್ಥಳಕ್ಕೆ ಬಂದ ನಿಂಬರ್ಗಾ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net