ಕೇಂದ್ರ ಮಾಜಿ ಸಚಿವ ಪಿ.ರಂಗರಾಜನ್​ರ ಪತ್ನಿ ಕೊಲೆ! ಮನೆ ಕೆಲಸದವರಿಂದಲೇ ತಡರಾತ್ರಿ ಕೃತ್ಯ

kitty Kumaramangalam
Published on

ನವದೆಹಲಿ: ಕೇಂದ್ರದ ಮಾಜಿ ಸಚಿವ, ಬಿಜೆಪಿ ನಾಯಕ ದಿವಂಗತ ಪಿ.ರಂಗರಾಜನ್ ಕುಮಾರಮಂಗಲಂ ಅವರ ಪತ್ನಿಯನ್ನು ಮಂಗಳವಾರ ರಾತ್ರಿ ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಲಾಗಿದೆ.

ಕಿಟ್ಟಿ ಕುಮಾರಮಂಗಲಂ ಮೃತರು. 2000ರ ಆಗಸ್ಟ್​ 23ರಂದು ಪಿ.ರಂಗರಾಜನ್ ಮೃತಪಟ್ಟಿದ್ದರು. ಇವರ ಪತ್ನಿ ಕಿಟ್ಟಿ ಅವರು ವಸಂತ್ ವಿಹಾರ್​ನ ನಿವಾಸದಲ್ಲಿ ವಾಸವಿದ್ದರು.

ಮಂಗಳವಾರ ರಾತ್ರಿ ಮನೆಗೆ ನುಗ್ಗಿದ ದುಷ್ಕರ್ಮಿಗಳು ಕಿಟ್ಟಿ ಅವರನ್ನು ಬರ್ಬರವಾಗಿ ಕೊಂದಿದ್ದಾರೆ. ಕೊಲೆ ಆರೋಪಿಗಳ ಪೈಕಿ ಓರ್ವನನ್ನು ದೆಹಲಿ ಪೊಲೀಸರು ಬಂಧಿಸಿದ್ದು, ಮತ್ತಿಬ್ಬರ ಪತ್ತೆಗೆ ಬಲೆ ಬೀಸಿದ್ದಾರೆ.

ಕಿಟ್ಟಿ ಕುಮಾರಮಂಗಲಂ ಅವರು ವೃತ್ತಿಯಲ್ಲಿ ವಕೀಲರಾಗಿದ್ದರು. ಇವರ ಮನೆಯಲ್ಲಿ ಕೆಲಸ ಮಾಡಿಕೊಂಡಿದ ರಾಜು ಎಂಬಾತ ಮತ್ತಿಬ್ಬರು ಸಹ ಕೆಲಸಗಾರರೊಂದಿಗೆ ನಿನ್ನೆ ರಾತ್ರಿ ಮನೆಗೆ ಬಂದಿದ್ದ. ಆ ವೇಳೆ ಮನೆಯಲ್ಲಿದ್ದ ಮಂಜು ಎಂಬಾಕೆಯನ್ನು ಕೋಣೆಯಲ್ಲಿ ಕೂಡಿ ಹಾಕಿ, ಕಿಟ್ಟು ಅವರನ್ನು ಬರ್ಬರವಾಗಿ ಕೊಂದು ಮನೆಯಲ್ಲಿದ್ದ ಚಿನ್ನಾಭರಣ ಮತ್ತು ಹಣ ಲೂಟಿ ಮಾಡಿದ್ದಾರೆ. ಸದ್ಯ ರಾಜು ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net