ಕಲಬುರಗಿಯಲ್ಲಿ ಡಬಲ್ ಮರ್ಡರ್: ತಡರಾತ್ರಿ ಮಲಗಿದ್ದಲ್ಲೇ ಪತ್ನಿ-ಮಗಳ ತಲೆ ಒಡೆದ ಕ್ರೂರಿ

murder case
Published on

ಕಲಬುರಗಿ: ಮನೆಯಲ್ಲಿ ನಿದ್ರೆ ಮಾಡುತ್ತಿದ್ದ ತಾಯಿ-ಮಗಳನ್ನ ಇಲ್ಲೊಬ್ಬ ಪಾಪಿ ಭೀಕರವಾಗಿ ಹತ್ಯೆ ಮಾಡಿದ್ದಾನೆ. ಇಂತಹ ಕ್ರೂರಿ ಘಟನೆ ಸೇಡಂ ಪಟ್ಟಣದ ಈಶ್ವರ್ ನಗರದಲ್ಲಿ ಬುಧವಾರ ತಡರಾತ್ರಿ ಸಂಭವಿಸಿದೆ.

ಜಗದೀಶ್ವರಿ(45) ಮತ್ತು ಇವರ ಮಗಳು ಪ್ರಿಯಾಂಕಾ(11) ಕೊಲೆಯಾದ ದುರ್ದೈವಿಗಳು. ಜಗದೀಶ್ವರಿಯ ಗಂಡ ದಿಗಂಬರ್(46) ಕೊಲೆ ಆರೋಪಿ.

ಪತ್ನಿಯ ಶೀಲ ಶಂಕಿಸಿ ಜಗಳ ಮಾಡುತ್ತಿದ್ದ ದಿಗಂಬರ್​, ಬುಧವಾರ ರಾತ್ರಿ ನಿದ್ರೆಗೆ ಜಾರಿದ್ದ ತಾಯಿ-ಮಗಳ ತಲೆಗೆ ಕಟ್ಟಿಗೆಯಿಂದ ಮನಸೋ ಇಚ್ಛೆ ಒಡೆದಿದ್ದಾನೆ. ತೀವ್ರ ರಕ್ತಸ್ರಾವ ಆಗಿ ಅಮ್ಮ-ಮಗಳು ಇಬ್ಬರೂ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ. ಆರೋಪಿಯನ್ನು ಸೇಡಂ ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net