

ಕಲಬುರಗಿ: ಬಾವಿಯಲ್ಲಿ ನೀರು ತರಲು ಹೋಗಿದ್ದ ಶಿಕ್ಷಕರೊಬ್ಬರು ಕಾಲು ಜಾರಿ ಬಾವಿಗೆ ಬಿದ್ದು ಮೃತಪಟ್ಟ ಘಟನೆ ಅಫಜಲಪುರ ತಾಲೂಕಿನ ತೆಲ್ಲೂರ್ ಗ್ರಾಮದಲ್ಲಿ ಸಂಭವಿಸಿದೆ.
ಮಲ್ಲಿಕಾರ್ಜುನ್ ಮಡಿವಾಳ(30) ಮೃತರು. ತನ್ನ ಹೊಲದಲ್ಲಿರುವ ಬಾವಿಯಲ್ಲಿ ನೀರು ತರಲು ಮಲ್ಲಿಕಾರ್ಜುನ್ ತೆರಳಿದ್ದರು. ನೀರು ತರುವಾಗ ಕಾಲು ಜಾರಿ ಬಾವಿಯಲ್ಲಿ ಬಿದ್ದಿದ್ದಾರೆ. ಈಜು ಬಾರದ ಹಿನ್ನೆಲೆ ನೀರಲ್ಲಿ ಮುಳಿಗಿ ಮೃತಪಟ್ಟಿದ್ದಾರೆ.
ಜಮೀನಿನಲ್ಲಿ ಬೆಳೆದಿರುವ ಕಡಲೆಗೆ ಕ್ರಿಮಿನಾಶಕ ಔಷಧ ಸಿಂಪಡಿಸಲೆಂದು ಬಾವಿಯಲ್ಲಿ ನೀರು ತರಲು ಹೋಗಿದ್ದರು. ಈ ವೇಳೆ ಅವಘಡ ಸಂಭವಿಸಿದೆ. ಗಾಣಗಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.