ಕೀಲುಕುದುರೆ ಕಲಾವಿದನಿಗೆ ಒಲಿದ ಪುರಸ್ಕಾರ

klr janapada
ಕೀಲುಕುದುರೆ ವೇಷದಾರಿ ಎಂ.ತೋಪಣ್ಣ.
Published on

ಕೋಲಾರ: ಕರ್ನಾಟಕ ಜಾನಪದ ಅಕಾಡೆಮಿಯಿಂದ 2023ನೇ ಸಾಲಿನ ಪ್ರಶಸ್ತಿ ಪುರಸತರ ಪಟ್ಟಿಯನ್ನು ಸೋಮವಾರ ಪ್ರಕಟಿಸಿದ್ದು, ಜಿಲ್ಲೆಯ ಕೀಲುಕುದುರೆ ಕಲಾವಿದ ತೋಪಣ್ಣ ಮಂಚಂಡಹಳ್ಳಿ ಭಾಜನರಾಗಿದ್ದಾರೆ.

ಕೋಲಾರ ತಾಲೂಕಿನ ಮಂಚಂಡಹಳ್ಳಿಯ ಮುನಿಯಪ್ಪ ಮತ್ತು ನಾಗಮ್ಮ ಪುತ್ರ ಎಂ.ತೋಪಣ್ಣ ಅವರು ಸುಮಾರು ಐದು ದಶಕಗಳಿಂದ ಜಾನಪದ ಕ್ಷೇತ್ರದಲ್ಲಿ ತೋಡಗಿಸಿಕೊಂಡು ಜನರನ್ನು ರಂಜಿಸುತ್ತಿದ್ದಾರೆ.

ರಾಜ್ಯ ಜಾನಪದ ಪ್ರಶಸ್ತಿ ಪುರಸತ ಕಲಾವಿದ ಜಂಗಮಕೋಟೆಯ ಕೆ.ಎಸ್​.ಮುನಿಯಪ್ಪ ಅವರ ಕಲಾ ಪ್ರೇರಣೆಯಿಂದ ಕಲೆಯಲ್ಲಿ ಆಸಕ್ತಿ ಮೂಡಿಸಿಕೊಂಡಿದ್ದಾರೆ. ಬಾಲ್ಯದಿಂದ ಅಜ್ಜಿ ಮನೆಯಲ್ಲೇ ಇದ್ದುಕೊಂಡು ಮಾವನ ಜತೆ ಕಲಾಪ್ರದರ್ಶನಕ್ಕೆ ಹೋಗುತ್ತಿದ್ದ ತೋಪಣ್ಣ ಶ್ರೀ ವಿನಾಯಕ ಕೀಲುಕುದುರೆ ನೃತ್ಯ ಯುವಕರ ಕ್ಷೇಮಾಭಿವೃದ್ಧಿ ಸಂಘ ಕಟ್ಟಿಕೊಂಡಿದ್ದಾರೆ.

ಕೀಲುಕುದುರೆ ಜತೆಗೆ ಗಾರುಡಿಗೊಂಬೆ, ಕಾವಡಿ ಕುಣಿತ ಪ್ರದರ್ಶಿಸುವ ಅಪರೂಪದ ಕಲಾವಿದ.ಗೊಂಬೆ ತಯಾರಿಸುವುದರಲ್ಲಿ ಅನುಭವಿ. ನಂಜುಂಡೇಶ್ವರ ಗಾರುಡಿಗೊಂಬೆ ನೃತ್ಯ ಯುವಕರ ಸಂಘ, ಶಾಲಿವಾಹನ ಗಾರುಡಿಗೊಂಬೆ ಕಲಾ ಸಂಘಗಳ ಮೂಲಕ ಕಲಿಯುವವರಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ.

ಕಳೆದ 30 ವರ್ಷಗಳಿಂದ ದೆಹಲಿ ಕರ್ನಾಟಕ ಸಂಘ, ಕೇರಳ, ಆಂಧ್ರಪ್ರದೇಶ, ಮೈಸೂರು ದಸರಾ ಮಹೋತ್ಸವ ಸೇರಿ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಕಲಾ ಪ್ರದರ್ಶನ ನೀಡಿ ಛಾಪು ಮೂಡಿಸಿದ್ದಾರೆ.

ಕುಣಿತ ಕೀಲುಕುದುರೆ ಕಿರುನೋಟ:

ಜನಪ್ರಿಯ ಜಾನಪದ ಕುಣಿತ ಕೀಲುಕುದುರೆ. ಹೆಸರೇ ಹೇಳುವಂತೆ ಮರದಿಂದ ಮಾಡಿದ ಕೀಲುಗಳಿಂದ ರಚಿತವಾದ ಕುದುರೆ, ಕೀಲುಕುದುರೆ ಆಡಿಸುವವನ ಕಾಲಿಗೆ ಎರಡು ಅಡಿ ಉದ್ದದ ಮರಗಾಲು ಕಟ್ಟಿಕೊಂಡಿರುತ್ತಾರೆ. ಕುದುರೆ ಆಕಾರದ ಬಿದಿರಿಗೆ ಅದೇ ಅಳತೆಯ ಬಣ್ಣದ ಗೌನನ್ನು ಹೊಂದಿಸಿರುತ್ತಾರೆ. ಸಾಮಾನ್ಯವಾಗಿ ವೇಷಭೂಷಣವನ್ನು ಧರಿಸಿದ ಕೀಲುಕುದುರೆ ಕಲಾವಿದರು ರಾಜ&ರಾಣಿಯಂತೆ ಕಿರೀಟ, ಭುಜಕೀರ್ತಿ, ಎದೆಹಾರ, ನಡುಬಿಲ್ಲೆ, ವೀರಗಾಸೆ ರಾಜಯೋಗ್ಯವಾದ ವೇಷಭೂಷಣ ತೊಟ್ಟಿರುತ್ತಾರೆ. ಮುಖಕ್ಕೆ ಬಣ್ಣ ಕಾಲಿಗೆ ಗೆಜ್ಜೆಗಳಿರುತ್ತವೆ ಹೆಣ್ಣು ಮತ್ತು ಗಂಡು ವೇಷಗಳು ಜತೆ ಜತೆಯಲ್ಲಿ ಕುಣಿಯುವುದು ಆಕರ್ಷಣೆಯವಾಗಿರುತ್ತದೆ.

ಬಾಕ್ಸ್​...

ಸರ್ಕಾರ ಪ್ರೋತ್ಸಾಹಿಸಲಿ

ಜನರನ್ನು ಮನರಂಜಿಸುವುದು ನಮ್ಮ ಕಲೆಯಾಗಿದೆ. ಹಿಂದೆ ನಮ್ಮ ಕಲೆಗಳನ್ನು ಜನ ಗುರುತಿಸುತ್ತಿದ್ದರು, ಈಗೆಲ್ಲ ಬದಲಾದ ವ್ಯವಸ್ಥೆಯಿಂದ ಕೀಲುಕುದುರೆ ಕಲೆ ನೆಪತ್ಯಕ್ಕೆ ಸರಿಯುತ್ತಿದೆ. ಸರ್ಕಾರ ಕಲಾವಿದರನ್ನು ಗುರುತಿಸಿ ಜಾನಪದ ಕಲೆಗಳನ್ನು ಪ್ರೋತ್ಸಾಹಿಸಬೇಕಿದೆ ಎಂದು ಕಲಾವಿದ ತೋಪಣ್ಣ ಮಂಚಂಡಹಳ್ಳಿ ತಿಳಿಸಿದರು.

ಕೋಟ್​...

ಹಲವು ದಶಕಗಳಿಂದ ಕಲಾ ಸೇವೆ ಮಾಡುತ್ತಿದ್ದು, ತಡವಾಗಿ ಆದರೂ ಅಕಾಡೆಮಿ ಗುರುತಿಸಿ ಪ್ರಶಸ್ತಿ ನೀಡಿರುವುದು ಖುಷಿ ತಂದಿದೆ.

- ತೋಪಣ್ಣ ಮಂಚಂಡಹಳ್ಳಿ, ಕಲಾವಿದ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net