ಭಕ್ತಿಯ ನಡಿಗೆಯಿಂದ ಜೀವನದಲ್ಲಿ ಫಲ

30-RPT-1
ರಿಪ್ಪನ್‌ಪೇಟೆ ಸಮೀಪದ ಹೊಂಬುಜ ಜೈನಮಠಕ್ಕೆ ಆಗಮಿಸಿದ ಶ್ರಾವಕರೊಂದಿಗೆ ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ.
Published on

ರಿಪ್ಪನ್‌ಪೇಟೆ: ಮಾತಾ ಪದ್ಮಾವತಿ ದೇವಿ ದರ್ಶನಾಶೀರ್ವಾದ ಬಯಸಿ ವ್ರತಧಾರಿಗಳಾದ ಉತ್ತರ ಕರ್ನಾಟಕದ ಭಕ್ತರು ಶ್ರೀಕ್ಷೇತ್ರಕ್ಕೆ ನೂರಾರು ಕಿ.ಮೀ ದೂರವನ್ನು ಕಾಲ್ನಡಿಗೆಯಲ್ಲಿ ಬಂದಿದ್ದು, ದೇವಿಯು ಅವರ ಜೀವನದಲ್ಲಿ ಸುಖ, ಸಂತೋಷದ ಫಲ ನೀಡಲಿ ಎಂದು ಹೊಂಬುಜ ಜೈನ ಮಠದ ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳಿದರು.

ಸಮೀಪದ ಹೊಂಬುಜ ಜೈನಮಠದಲ್ಲಿ ಶ್ರಾವಣ ಶುಕ್ರವಾರವಾದ ವಿಶೇಷ ಪೂಜೆಗೆ 13 ವರ್ಷಗಳಿಂದ ನಿರಂತರವಾಗಿ ಪಾದಯಾತ್ರೆ ಮೂಲಕ ಉತ್ತರ ಕರ್ನಾಟಕದ ಐನಾಪುರ, ಅಥಣಿ, ಶಿರಹಟ್ಟಿ ಹಾಗೂ ದುಂಡಶಿಯಿಂದ ಆಗಮಿಸಿದ ಶ್ರಾವಕರನ್ನು ಬರಮಾಡಿಕೊಂಡು ಆಶೀರ್ವದಿಸಿ ಮಾತನಾಡಿದರು.
ಶ್ರಾವಣ ಮಾಸದ ಅಂತಿಮ ಶುಕ್ರವಾರ ವಿಶೇಷ ಶೋಡಷೋಪಚಾರ ಪೂಜೆ, ಅಲಂಕಾರ ಪೂಜೆ, ಪರಂಪರಾಗತ ಜಿನಾಗಮ ಪೂಜಾ ವಿಧಿವಿಧಾನಗಳಲ್ಲಿ ಪಾಲ್ಗೊಂಡ ಭಕ್ತರ ಕುಟುಂಬಗಳಿಗೆ ಒಳಿತಾಗಲಿದೆ. ಐತಿಹಾಸಿಕ, ಧಾರ್ಮಿಕ ಪುಣ್ಯಧಾಮ ಹೊಂಬುಜ ಅಭಿವೃದ್ಧಿಗೆ ಸಹಕಾರ ನೀಡುತ್ತಿರುವ ಎಲ್ಲರಿಗೂ ಪದ್ಮಾವತಿ ದೇವಿ ಶುಭ ತರುತ್ತಾಳೆ. ಭಕ್ತಿಯ ನಡಿಗೆ ಜೀವನದಲ್ಲಿ ಶುಭಫಲ ನೀಡುತ್ತದೆ ಎಂದರು. ಬೆಳಗಾವಿ ವಕೀಲ ಸಂಜಯ ಕುಚನೂರೆ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net