ವಿಕ್ರಾಂತ್​ ರೋಣ ಸಿನಿಮಾ ಟೀಸರ್​ ರಿಲೀಸ್​ಗೆ ಡೇಟ್​ ಫಿಕ್ಸ್​: ಯುಗಾದಿ ಹಬ್ಬಕ್ಕೆ ಮತ್ತಷ್ಟು ಮೆರುಗು

Vikrant Rona
Published on

ಬೆಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್​ ಅಭಿನಯದ, ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ “ವಿಕ್ರಾಂತ್​ ರೋಣ” ಸಿನಿಮಾದ ರಿಲೀಸ್ ಟೀಸರ್ ಏ.2ರ ಬೆಳಗ್ಗೆ 9.55ಕ್ಕೆ ಬಿಡುಗಡೆ ಆಗಲಿದೆ.

ವಿಕ್ರಾಂತ್​ ರೋಣ ಸಿನಿಮಾ ಸುದೀಪ್​ ಸಿನಿ ಕೆರಿಯರ್​ನಲ್ಲೇ ವಿಭಿನ್ನ ಸಿನಿಮಾ ಆಗಲಿದೆ. ಭಾರತ ಮಾತ್ರವಲ್ಲದೇ ವಿದೇಶಿ ಭಾಷೆಗಳಲ್ಲೂ ಚಿತ್ರ ತೆರೆಕಾಣಲಿದ್ದು, ಇದನ್ನು ಪ್ಯಾನ್​ ವರ್ಲ್ಡ್​ ಸಿನಿಮಾ ಎಂದೇ ಪರಿಗಣಿಸಲಾಗಿದೆ. ದುಬೈನ ಬುರ್ಜ್ ಖಲೀಫಾ ಮೇಲೆ ವಿಕ್ರಾಂಟ್​ ರೋನ ಸಿನಿಮಾ ಶೀರ್ಷಿಕೆ ಅನಾವರಣ ಮಾಡಿ ಸ್ಯಾಂಡಲ್​ವುಡ್​ನಲ್ಲಿ ಯಾರೂ ಮಾಡದ ದಾಖಲೆಯೊಂದನ್ನೂ ಚಿತ್ರ ತಂಡ ಬರೆದಿತ್ತು. ವಿಕ್ರಾಂತ್​ ರೋಣ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಇದೀಗ ಇದೇ ಶನಿವಾರ ಯುಗಾದಿ ಹಬ್ಬದ ಶುಭದಿನದಂದು ಟೀಸರ್​ ಬಿಡುಗಡೆ ಆಗಲಿದೆ.

ಈ ಕುರಿತು ನಿರ್ದೇಶಕ ಅನೂಪ್ ಭಂಡಾರಿ, ‘ಏ.2ರಂದು ಬೆಳಗ್ಗೆ 9.55ಕ್ಕೆ ವಿಕ್ರಾಂತ್ ರೋಣದ ರಿಲೀಸ್ ಟೀಸರ್ ಬಿಡುಗಡೆ ಮಾಡುತ್ತೇವೆ’ ಎಂದು ಟ್ವೀಟ್ ಮೂಲಕ ಘೋಷಿಸಿದ್ದಾರೆ. ಈ ಸಿನಿಮಾಗೆ ಜಾಕ್​ ಮಂಜು ಬಂಡವಾಳವನ್ನು ಹೂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net