

ಬೆಂಗಳೂರು: ಜೂನ್ 14ರಂದು ರಾಜ್ಯದ 7 ವಿಧಾನ ಪರಿಷತ್ ಸದಸ್ಯರ ಅಧಿಕಾರಾವಧಿ ಪೂರ್ಣಗೊಳ್ಳಲಿದ್ದು, ಆ ಸ್ಥಾನಗಳಿಗೆ 2022ರ ಜೂನ್ 3ರಂದು ಚುನವಾಣೆ ನಡೆಯಲಿದೆ. ಈ ಕುರಿತು ಮಂಗಳವಾರ ಚುನಾವಣಾ ಆಯೋಗ ವೇಳಾಪಟ್ಟಿ ಪ್ರಕಟಿಸಿದೆ. ಲಕ್ಷ್ಮಣ್ ಸವದಿ, ರಾಮಪ್ಪ ತಿಮ್ಮಾಪುರ್, ಅಲ್ಲಂ ವೀರಭದ್ರಪ್ಪ, ಎಚ್.ಎಂ.ರಮೇಶ್ ಗೌಡ, ವೀಣಾ ಅಚ್ಚಯ್ಯ ಎಸ್., ನಾರಾಯಣಸ್ವಾಮಿ ಕೆ.ವಿ., ಲೇಹರ್ ಸಿಂಗ್ ಅವರ ಅಧಿಕಾರಾವಧಿ ಜೂನ್ 14ರಂದು ಕೊನೆಗೊಳ್ಳಲಿದೆ.