

ಲಕ್ನೊ: ಈ ಭಾರಿಯೂ ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ ನೇತೃತ್ವದ ಸರ್ಕಾರ ರಚನೆಯಾಗಿಲಿದೆ. ಒಟ್ಟು 403 ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಚುನಾವಣೆಯ ಮತಎಣಿಕೆ ಇಂದು ಬಿರುಸಿನಿಂದ ಸಾಗಿದ್ದು, 290 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದೆ. ಆದರೆ ಕಾಂಗ್ರೆಸ್ 2 ಅಂಕಿ ದಾಟಿಲ್ಲ.
ಉತ್ತರ ಪ್ರದೇಶದಲ್ಲಿ ಬಿಜೆಪಿ ಬಹುಮತಕ್ಕೆ ಬೇಕಿರುವ ಮ್ಯಾಜಿಕ್ ಸಂಖ್ಯೆಯನ್ನು ದಾಟಿದೆ. 120 ಸ್ಥಾನಗಳಲ್ಲಿ ಎಸ್‌ಪಿ ಮುನ್ನಡೆ ಸಾಧಿಸಿದರೆ, ಬಿಎಸ್‌ಪಿ, ಕಾಂಗ್ರೆಸ್ ಎರಡಂಕಿ ತಲುಪಲು ಸಾಧ್ಯವಾಗಿಲ್ಲ. ಗೋರಖ್‌ಪುರ ನಗರ ಕ್ಷೇತ್ರದಲ್ಲಿ ಯುಪಿ ಸಿಎಂ ಯೋಗಿ ಆದಿತ್ಯನಾಥ್‌ಗೆ ಮುನ್ನಡೆಯಾಗಿದ್ದು, ಗೆಲುವು ಬಹುತೇಕ ಖಚಿತವಾಗಿದೆ.