

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಫಿಟ್ನೆಸ್ ಚಾಲೆಂಜ್ ನಿಮಗೆಲ್ಲರಿಗೂ ಗೊತ್ತೇ ಇದೆ. ಹಮ್ ಫಿಟ್ಥೋ ಇಂಡಿಯಾ ಫಿಟ್ ಹೇ ಎಂದು ಹೇಳಿದ್ದರು ಪ್ರಧಾನಿಯವರು. ಇದೀಗ ಸಾರ್ವಜನಿಕರು ಫಿಟ್ ಆಗಿರಲಿ ಎಂದು ಕಾಳಜಿ ತೋರಿಸಿರುವ ದೆಹಲಿಯ ರೈಲ್ವೆ ನಿಲ್ದಾಣವೊಂದು ಬಸ್ಕಿ ಹೊಡೆದರೆ ಉಚಿತ ಪ್ಲಾಟ್ಫಾರ್ಮ್ ಟಿಕೆಟ್ ಕೊಡುವ ಮಷಿನ್ನ್ನು ಇರಿಸಿದೆ.
ದೆಹಲಿಯ ಆನಂದ ವಿಹಾರ್ ರೈಲ್ವೆ ನಿಲ್ದಾಣದಲ್ಲಿ ಒಂದು ವಿಶೇಷವಾದ ಮಷಿನ್ನ್ನು ಇಡಲಾಗಿದೆ. ಈ ಮಷಿನ್ನ ಮುಂದೆ ನೀವು ಬಸ್ಕಿ ಹೊಡೆದರೆ ನಿಮಗೆ ಅದು ಉಚಿತ ಪ್ಲಾಟ್ಫಾರ್ಮ್ ಟಿಕೆಟ್ನ್ನು ನೀಡುತ್ತದೆ.
ಈ ಮಷಿನ್ನ ಕುರಿತಾಗಿ ಟ್ವಿಟ್ಟರ್ನಲ್ಲಿ ಮಾಹಿತಿ ಹಂಚಿಕೊಂಡಿರುವ ರೈಲ್ವೆ ಸಚಿವ ಪಿಯೂಷ್ ಗೋಯಲ್, "ಫಿಟ್ನೆಸ್ನೊಂದಿಗೆ ಉಳಿತಾಯ: ದೆಹಲಿಯ ಆನಂದ್ ವಿಹಾರ್ ರೈಲ್ವೆ ನಿಲ್ದಾಣದಲ್ಲಿ ಫಿಟ್ನೆಸ್ನ್ನು ಉತ್ತೇಜಿಸಲು ವಿಶಿಷ್ಟ ಪ್ರಯೋಗವೊಂದನ್ನು ಮಾಡಲಾಗಿದೆ. ಇಲ್ಲಿ ಸ್ಥಾಪಿಸಲಾಗಿರುವ ಯಂತ್ರದ ಮುಂದೆ ಬಸ್ಕಿ ಹೊಡೆದರೆ ಅದು ನಿಮಗೆ ಉಚಿತ ಪ್ಲಾಟ್ಫಾರ್ಮ್ ಟಿಕೆಟ್ಗಳನ್ನು ನೀಡುತ್ತದೆ" ಎಂದು ಬರೆದುಕೊಂಡಿದ್ದಾರೆ. (ಏಜೆನ್ಸೀಸ್)