ಸಚಿವ ಉಮೇಶ್​ ಕತ್ತಿಯನ್ನು ನೋಡುತ್ತಿದ್ದಂತೆ ಓಡಿಹೋದ ಕಾಡುಜನ!

umesh katti
Published on

ಗುಂಡ್ಲುಪೇಟೆ: ಬಂಡೀಪುರ ಹುಲಿ ಸಂರಕ್ಷಿತಾರಣ್ಯ ಪ್ರದೇಶಕ್ಕೆ ಭೇಟಿ ನೀಡಿ ಕಾಡಂಚಿನ ಗ್ರಾಮಗಳ ಜನರ ಸಮಸ್ಯೆ ಆಲಿಸಲು ಬಂದ ಅರಣ್ಯ ಸಚಿವ ಉಮೇಶ್ ಕತ್ತಿ ಅವರನ್ನು ನೋಡಿದ ಕಾಡುಜನರು ಓಡಿ ಹೋದ ಘಟನೆ ಗುರುವಾರ ಸಂಭವಿಸಿದೆ.

ಅರೆ, ಇದೇನಿದು? ಸಚಿವರು, ಜನಪ್ರತಿನಿಧಿಗಳು ತಮ್ಮೂರಿಗೆ ಬರುತ್ತಾರೆ ಅಂದ್ರೆ ಮುಂಜಾನೆಯಿಂದಲೇ ಅವರಿಗಾಗಿ ಜೈಕಾರ ಕೂಗುತ್ತಾ ಕಾಯುವವರೇ ಹೆಚ್ಚು. ಆದ್ರೆ ಈ ಊರಿಗೆ ಸಚಿವರು ಬರುತ್ತಿದ್ದಂತೆ ಜನ ಓಡಿ ಹೋಗಿದ್ದೇಕೆ ಗೊತ್ತಾ?

ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಮಗುವಿನಹಳ್ಳಿಯ ಹಾಡಿಗೆ ಸಚಿವರು ಭೇಟಿ ನೀಡುತ್ತಿದ್ದಂತೆ ಸ್ಥಳೀಯರು ಕಾಡಿನತ್ತ ಓಡಿ ಹೋದರು. ಕರೊನಾ ವ್ಯಾಕ್ಸಿನ್ ಹಾಕುತ್ತಾರೆ ಎಂಬ ಭೀತಿಯಿಂದ ಪಲಾಯನ‌ ಮಾಡಿದರು. ಕೊನೆಗೆ ಗ್ರಾಮಸ್ಥರನ್ನು ಮನವೊಲಿಸಿದ ಆರ್​ಎಫ್​ಒ ನವೀನಕುಮಾರ್ ಅವರು ಕೆಲವರನ್ನು ಸಚಿವರ ಬಳಿ ಕರೆತಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net