ನಮ್​ ದೇಶಕ್ಕೆ ಯಾಕ್​ ಬಂದ್ರಿ... ರೈಫಲ್​ ಹಿಡಿದ ಸೈನಿಕನಿಗೆ ರಸ್ತೆಯಲ್ಲೇ ಪುಟ್ಟ ಬಾಲಕಿ ಆವಾಜ್! ಮನಕಲಕುತ್ತೆ ಈ ದೃಶ್ಯ

ukraine
Published on

ಬೆಂಗಳೂರು: ರಷ್ಯಾ ಮತ್ತು ಯೂಕ್ರೇನ್​ ನಡುವಿನ ಯುದ್ಧ ಇಡೀ ಜಗತ್ತನ್ನೇ ತಲ್ಲಣಗೊಳಿಸಿದೆ. ರಷ್ಯಾದ ಮಾರಕ ದಾಳಿಗೆ ಯೂಕ್ರೇನ್​ ಅಕ್ಷರಶಃ ನಲುಗಿದೆ. ತನ್ನ ತಾಯ್ನಾಡನ್ನು ರಕ್ಷಿಸಿಕೊಳ್ಳಲು ಅಲ್ಲಿನ ಜನ ಸ್ವಯಂ ಪ್ರೇರಿತವಾಗಿ ಯುದ್ಧಭೂಮಿಗೆ ಇಳಿದಿದ್ದಾರೆ. ಅಪಾರ ಪ್ರಮಾಣದ ಸಾವು-ನೋವು ಸಂಭವಿಸಿದೆ. ಈ ವೇಳೆ ವಿಡಿಯೋವೊಂದು ಸಖತ್​ ವೈರಲ್​ ಆಗಿದ್ದು, ಪುಟ್ಟ ಬಾಲೆಯ ಧೈರ್ಯಕ್ಕೆ ಭೇಷ್​ ಎನ್ನುತ್ತಾ, ರಷ್ಯಾ ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದಾರೆ.

ರೈಫಲ್​ ಹಿಡಿದು ಬಂದ ಸೈನಿಕನೊಬ್ಬನಿಗೆ ನಮ್ಮ ದೇಶಕ್ಕೆ ಯಾಕ್​ ಬಂದ್ರಿ ನೀವು ಎನ್ನುತ್ತಾ ಪ್ರತಿರೋಧ ಬಾಲಕಿ ವ್ಯಕ್ತಪಡಿಸಿದ್ದಾಳೆ. ಸೈನಿಕನಿಗೆ ಕೈ ತೋರಿಸುತ್ತಾ, ಹೊಡೆಯಲು ಯತ್ನಿಸಿ ಅಸಮಾಧಾನ ಹೊರಹಾಕಿದ್ದಾಳೆ. 19 ಸೆಕೆಂಡ್​ ಇರುವ ವಿಡಿಯೋ ತುಣುಕು ಸಖತ್​ ವೈರಲ್​ ಆಗ್ತಿದೆ. ಇದು ಯೂಕ್ರೇನ್​ನಲ್ಲಿ ದಾಳಿ ಮಾಡುತ್ತಿದ್ದ ರಷ್ಯಾ ದೇಶದ ಸೈನಿಕರೊಬ್ಬರ ಬಳಿ ಯೂಕ್ರೇನ್​ ಬಾಲಕಿ ಯುದ್ಧಕ್ಕೆ ಪ್ರತಿರೋಧ ವ್ಯಕ್ತಪಡಿಸಿದ ಪರಿ ಎನ್ನಲಾಗುತ್ತಿದೆ. ಕೆಲವರು ಇದು 9 ವರ್ಷದ ಹಳೇ ವಿಡಿಯೋ ಎಂದೂ ಹೇಳಿದ್ದಾರೆ. ಅದ್ಹೇನೆ ಇರಲಿ, ಯೂಕ್ರೇನ್​ ಮೇಲೆ ರಷ್ಯಾ ಪಡೆ ಕ್ಷಿಪಣಿ ಹಾರಿಸುತ್ತಾ ಇಡೀ ಯೂಕ್ರೇನ್​ ಅನ್ನು ಸ್ಮಶಾನ ಮಾಡಲು ಯತ್ನಿಸುತ್ತಿರುವ ಸಂದರ್ಭದಲ್ಲಿ ಈ ವಿಡಿಯೋ ನೋಡಿದ್ರೆ ಮನಕಲಕುತ್ತೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net