7.3 ಕೆಜಿ ತೂಕದ ಮಗು ಜನನ

7KG Boy
Published on

ಲ್ಯಾನ್ಕೆಸ್ಟರ್: ಬ್ರೆಜಿಲ್​ನ ಮಹಿಳೆಯೊಬ್ಬರು ಇತ್ತೀಚೆಗೆ ಜನ್ಮ ನೀಡಿರುವ ಮಗುವಿನ ಗಾತ್ರ ಹಾಗೂ ತೂಕ ಎಲ್ಲರನ್ನು ಅಚ್ಚರಿಗೊಳಿಸುವಂತೆ ಮಾಡಿದೆ. ಮಗುವಿನ ಉದ್ದ 2 ಅಡಿ ಹಾಗೂ ತೂಕ 7.3 ಕೆ.ಜಿ. ಇದೆ. ಪಾರಿಂಟಿನ್ಸ್ ನ ಪಾಡ್ರೆ ಕೊಲಂಬೊ ಆಸ್ಪತ್ರೆಯಲ್ಲಿ ಜನಿಸಿರುವ ಮಗುವಿಗೆ ಆಂಗರ್​ಸನ್ ಸ್ಯಾಂಟೋಸ್ ಎಂದು ನಾಮಕರಣ ಮಾಡಲಾಗಿದೆ.

ಈ ಹಿಂದೆಯೂ ಅಸಹಜ ಗಾತ್ರ ಹಾಗೂ ತೂಕದ ಮಕ್ಕಳು ಜನಿಸಿದ ಉದಾಹರಣೆಗಳಿವೆ. 2016ರಲ್ಲಿ ಜನಿಸಿದ 6.8 ಕೆ.ಜಿ. ತೂಕದ ಶಿಶು ಬ್ರೆಜಿಲ್​ನಲ್ಲಿ ಇದುವರೆಗೆ ಜನಿಸಿದ ಅತಿ ಹೆಚ್ಚು ತೂಕದ ಮಗು ಎಂಬ ದಾಖಲೆ ಹೊಂದಿದ್ದು ಇದೀಗ ಆಂಗರ್​ಸನ್ ಸ್ಯಾಂಟೋಸ್ ಅದನ್ನು ಮುರಿದಿದೆ. ಆದರೆ, ವಿಶ್ವದಲ್ಲಿ ಇದಕ್ಕಿಂತ ಹೆಚ್ಚು ತೂಕದ ಮಗು ಜನಿಸಿರುವ ಉದಾಹರಣೆ ಇದೆ. 1955ರಲ್ಲಿ ಇಟಲಿಯಲ್ಲಿ 10.2 ಕೆ.ಜಿ. ತೂಕದ ಮಗು ಜನಿಸಿತ್ತು. ಜನನದ ಸಮಯದಲ್ಲಿ ಸಾಮಾನ್ಯವಾಗಿ ಗಂಡು ಮಗುವಿನ ತೂಕ 3.3 ಕೆಜಿ ಹಾಗೂ ಹೆಣ್ಣು ಮಗುವಿನ ತೂಕ 3.2 ಕೆಜಿ ವರೆಗೆ ಇರುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net