ಇಂದಿನಿಂದ ತಿರುಪತಿಯಲ್ಲಿ ಉಚಿತ ಸರ್ವದರ್ಶನ ಟೋಕನ್​​ ವಿತರಣೆ ಆರಂಭ

Tirupati
Published on

ತಿರುಪತಿ(ಆಂಧ್ರಪ್ರದೇಶ): ಕೆಲ ತಿಂಗಳುಗಳಿಂದ ತಿರುಪತಿಯ ತಿರುಮಲದಲ್ಲಿ ಸ್ಥಗಿತಗೊಳಿಸಲಾಗಿದ್ದ ಶ್ರೀವೆಂಕಟೇಶ್ವ ಸ್ವಾಮಿ ಸರ್ವದರ್ಶನ ಟೋಕನ್​​ಗಳನ್ನು ಭಕ್ತರಿಗೆ ನೀಡಲು ಟಿಟಿಡಿ (ತಿರುಮಲ-ತಿರುಪತಿ ದೇವಸ್ಥಾನಂ) ಪುನಾರಂಭಿಸಿದೆ.

ಕರೊನಾ ಸೋಂಕಿತರ ಪ್ರಮಾಣ ಹೆಚ್ಚಾದ ಹಿನ್ನೆಲೆ 2021ರ ಏಪ್ರಿಲ್ 11ರಿಂದ ಉಚಿತ ಸರ್ವದರ್ಶನ ಟೋಕನ್​ ವಿತರಣೆಯನ್ನು ಸ್ಥಗಿತಗೊಳಿಸಲಾಗಿತ್ತು. ನಾಲ್ಕೂವರೆ ತಿಂಗಳ ಬಳಿಕ ಅಂದರೆ ಇಂದಿನಿಂದ(ಸೆ.8) ಸರ್ವದರ್ಶನ ಟೋಕನ್​​ಗಳನ್ನು ಮತ್ತೆ ನೀಡಲಾಗುತ್ತಿದೆ ಎಂದು ಟಿಟಿಡಿ (ತಿರುಮಲ-ತಿರುಪತಿ ದೇವಸ್ಥಾನಂ) ಹೇಳಿದೆ. ಅಂದಹಾಗೆ ಈ ಅವಕಾಶ ಎಲ್ಲರಿಗೂ ಲಭ್ಯವಿಲ್ಲ.

ಸದ್ಯ ಸರ್ವದರ್ಶನ ಟೋಕನ್​ಗಳನ್ನು ಆಂಧ್ರದ ಚಿತ್ತೂರು ಜಿಲ್ಲೆಯ ಜನರು ಮಾತ್ರವೇ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಈಗಾಗಲೇ ವಿಶೇಷ ದರ್ಶನದ ಟಿಕೆಟ್​ ಪಡೆದಿರುವ ಭಕ್ತರಿಗೆ ಸರ್ವದರ್ಶನ ಟೋಕನ್​ ಸಿಗಲ್ಲ ಎಂದು ಟಿಟಿಡಿ ಸ್ಪಷ್ಟಪಡಿಸಿದೆ. ನಿತ್ಯ ಸರ್ವದರ್ಶನದ ಟೋಕನ್​ಗಳನ್ನು 2,000 ಮಂದಿಗಷ್ಟೇ ನೀಡಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net