More

    ಬೆಂಗಳೂರಿನ ಮಹಿಳಾ ಟೆಕ್ಕಿ ಮೇಲೆ ಅತ್ಯಾಚಾರ: ಮೂವರೂ ಮದ್ಯ ಕುಡಿದೆವು, ಪ್ರಜ್ಞೆ ಬಂದಾಗ ಆತ ಬೆತ್ತಲಾಗಿದ್ದ…

    ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಲ್ಲಿ ಮಹಿಳಾ ಟೆಕ್ಕಿಗೆ ಕಿಡಿಗೇಡಿಗಳು ಮದ್ಯ ಕುಡಿಸಿ ಅತ್ಯಾಚಾರವೆಸಗಿದ್ದಾರೆ ಎಂಬ ಕೇಸ್​ ಬಾಣಸವಾಡಿ ಪೊಲೀಸ್​ ಠಾಣೆಯಲ್ಲಿ ದಾಖಲಾಗಿದೆ.

    ಕಲಬುರ್ಗಿ ಮೂಲದ ಯುವತಿ ಸಂತ್ರಸ್ತೆ. ಬೆಂಗಳೂರಿನ ಪ್ರತಿಷ್ಠಿತ ಕಂಪನಿಯಲ್ಲಿ ಸಾಫ್ಟ್​ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ. ಯವತಿ ಕೊಟ್ಟ ದೂರಿನ ಮೇರೆಗೆ ಬಾಣಸವಾಡಿ ನಿವಾಸಿ ನೈಜೀರಿಯಾ ಮೂಲದ ಟೋನಿ(35) ಹಾಗೂ ಉಬಾಕಾ (36)ನನ್ನು ಪೊಲೀಸರು ಬಂಧಿಸಿದ್ದಾರೆ. ಕುಡಿದ ಮತ್ತಿನಲ್ಲಿದ್ದಾಗ ನನ್ನ ಮೇಲೆ ಅತ್ಯಾಚಾರ ನಡೆದಿದೆ. ನನಗೆ ಪ್ರಜ್ಞೆ ಬಂದಾಗ ನನ್ನ ಜತೆ ಉಬಾಕ ಬೆತ್ತಲೆಯಾಗಿದ್ದ ಎಂದು ಯುವತಿ ದೂರಿನಲ್ಲಿ ಆರೋಪಿಸಿದ್ದಾರೆ.

    ಸಂತ್ರಸ್ತ ಯುವತಿಗೆ ಹಲವು ವರ್ಷಗಳಿಂದ ನೈಜೀರಿಯಾ ಪ್ರಜೆ ಟೋನಿ ಪರಿಚಿತನಾಗಿದ್ದ. ಮತ್ತೋರ್ವ ಆರೋಪಿ ಉಬಾಕಾ ಹಲವು ಬಾರಿ ಯುವತಿಯನ್ನು ಪರಿಚಯ ಮಾಡಿಕೊಳ್ಳಲು ಯತ್ನಿಸಿದ್ದ. ಆದರೆ ಇಬ್ಬರ ನಡುವೆ ವೈಷಮ್ಯ ಉಂಟಾಗಿತ್ತು. ಆ.29ರಂದು ಯುವತಿಯನ್ನು ಸ್ನೇಹಿತರ ಮನೆಗೆ ಹೋಗೋಣ ಎಂದು ಉಬಾಕಾ ಮನೆಗೆ ಟೋನಿ ಕರೆದುಕೊಂಡು ಹೋಗಿದ್ದ. ಅಲ್ಲಿ ಉಬಾಕಾನನ್ನು ನೋಡಿದ ಯುವತಿ, ಟೋನಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಳು. ಟೋನಿ ಯುವತಿಯನ್ನು ಸಮಾಧಾನಪಡಿಸಿ ಮೂವರು ಜತೆಗೆ ಕುಳಿತು ಮದ್ಯ ಸೇವಿಸಿದ್ದರು.

    ಕುಡಿದ ಮತ್ತಿನಲ್ಲಿದ್ದಾಗ ತನ್ನ ಮೇಲೆ ಅತ್ಯಾಚಾರ ನಡೆದಿದೆ. ನನಗೆ ಪ್ರಜ್ಞೆ ಬಂದಾಗ ತನ್ನ ಜತೆ ಉಬಾಕ ಬೆತ್ತಲೆಯಾಗಿದ್ದ ಎಂದು ಯುವತಿ ದೂರಿನಲ್ಲಿ ಆರೋಪಿಸಿದ್ದಾರೆ. ಈ ಪ್ರಕರಣ ಆಧರಿಸಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

    ಮಗಳ ಪ್ರಿಯಕರನ ಕೊಂದು ಜೈಲು ಸೇರಿದ ಅಪ್ಪ-ಅಮ್ಮ! ಎಲ್ಲವನ್ನೂ ಕಳೆದುಕೊಂಡಾಕೆ ಕೊನೆಗೂ ಬದುಕಲಿಲ್ಲ

    ಮೈಸೂರಲ್ಲಿ ಗ್ಯಾಂಗ್​ ರೇಪ್​: ಆರೋಪಿಗಳಲ್ಲೊಬ್ಬ ಭಗ್ನಪ್ರೇಮಿ! ಲವ್​ ಫೇಲ್ಯೂರ್​ಗೆ ಲೈಂಗಿಕ ಚಟ ಅಂಟಿಸಿಕೊಂಡಿದ್ದ…

    ಚಿಕ್ಕಮಗಳೂರಲ್ಲಿ ಯುವಕನಿಗೆ ‘ಮೂತ್ರ ನೆಕ್ಕಿಸಿದ್ದ’ ಪಿಎಸ್​ಐಗೆ ನ್ಯಾಯಾಂಗ ಬಂಧನ

    ಮೈಸೂರಲ್ಲಿ ಗ್ಯಾಂಗ್​ ರೇಪ್​: ಆರೋಪಿಗಳಲ್ಲೊಬ್ಬ ಭಗ್ನಪ್ರೇಮಿ! ಲವ್​ ಫೇಲ್ಯೂರ್​ಗೆ ಲೈಂಗಿಕ ಚಟ ಅಂಟಿಸಿಕೊಂಡಿದ್ದ…

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts