ಪಶುವೈದ್ಯರು, ಕಂಪೌಂಡರ್ ನೀಡುವ ಚಿಕಿತ್ಸೆ ಒಂದೆ; ಸಚಿವರ ಹೇಳಿಕೆಗೆ ಖಂಡನೆ|Condemnation of Minister's statement

yalagodu
Published on

ಬೆಂಗಳೂರು: ಪಶುವೈದ್ಯರು ಮತ್ತು ಕಂಪೌಂಡರ್ ನೀಡುವ ಚಿಕಿತ್ಸೆ ಒಂದೇ ಎಂಬ ಪಶು ಸಂಗೋಪನಾ ಸಚಿವರ ಹೇಳಿಕೆಯನ್ನು ಕರ್ನಾಟಕ ಪಶುವೈದ್ಯಕೀಯ ಸಂಘ ಖಂಡಿಸಿದೆ(A treatment given by a veterinarian, a compounder; Condemnation of Minister's statement).

ಹಾವೇರಿಯಲ್ಲಿ ಪಶುಸಂಗೋಪನಾ ಸಚಿವರು ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡುವಾಗ, ಹಳ್ಳಿಗಳ ಆಸ್ಪತ್ರೆಯಲ್ಲಿ ಕಾಂಪೌಂಡರ್ ಹಾಗೂ ಡಾಕ್ಟರ್ ಕೊಡುವ ಚಿಕಿತ್ಸೆ ಒಂದೇ. ಆದರೆ, ಚಿಕಿತ್ಸೆ ಕೊಡುವ ವ್ಯಕ್ತಿ ಸರಿ ಇರಬೇಕು. ಚಿಕಿತ್ಸೆಯಲ್ಲಿ ಏನೂ ವ್ಯತ್ಯಾಸವಿಲ್ಲ ಎಂದು ಹೇಳಿದ್ದರು.

ಈ ಹೇಳಿಕೆಯನ್ನು ಖಂಡಿಸಿರುವ ಕರ್ನಾಟಕ ಪಶುವೈದ್ಯಕೀಯ ಸಂಘ, ಈ ಹೇಳಿಕೆ

ದುರದೃಷ್ಟಕರ. ಪಶುವೈದ್ಯ ವೃತ್ತಿ, ವೃತ್ತಿಪರರ ಮತ್ತು ಪಶುವೈದ್ಯ ವಿಜ್ಞಾನಕ್ಕೆ ಅವಹೇಳನಕಾರಿಯಾಗಿದೆ. ಪಶುವೈದ್ಯರಲ್ಲದವರು ಪ್ರಾಣಿಗಳ ಚಿಕಿತ್ಸೆಯಲ್ಲಿ ತೊಡಗಿಕೊಳ್ಳುವುದು ಶಿಕ್ಷಾರ್ಹ ಅಪರಾಧ. ಪಶುವೈದ್ಯರ ಮೇಲ್ವಿಚಾರಣೆಯಲ್ಲಿ ಕಿರು ಪಶುವೈದ್ಯಕೀಯ ಸೇವೆ ನೀಡುತ್ತಿರುವವರನ್ನು ಪಶುವೈದ್ಯರ ಸೇವೆಗೆ ಹೋಲಿಸಿ ನೀಡಿರುವ ಹೇಳಿಕೆಯನ್ನು ಕೂಡಲೇ ಹೀಂಪಡೆಯಬೇಕು ಎಂದು ಸಂಘದ ಅಧ್ಯಕ್ಷ ಡಾ.ಶಿವಶರಣಪ್ಪ ಜಿ.ಯಲಗೋಡ(Shivasharanappa Yalagodu) ಹಾಗೂ ಪ್ರಧಾನ ಕಾರ್ಯದರ್ಶಿ ಡಾ.ಎಂ.ರಾಮಚಂದ್ರಯ್ಯ(Ramachandraiah) ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net