ಯಶವಂತಪುರ-ಚಂಡಿಗಢಕ್ಕೆ ರೈಲು ಸಂಚಾರ ಆರಂಭ

New Project (8)
Published on

ಹುಬ್ಬಳ್ಳಿ: ನೈಋತ್ಯ ರೈಲ್ವೆ ವಲಯವು ಯಶವಂತಪುರ-ಚಂಡಿಗಢ ನಿಲ್ದಾಣಗಳ ಮಧ್ಯೆ ವಾರದಲ್ಲಿ 2 ದಿನ ಸಂಚರಿಸುವ ದ್ವಿ ಸಾಪ್ತಾಹಿಕ ಸೂಪರ್​ ಫಾಸ್ಟ್​ ವಿಶೇಷ ಎಕ್ಸ್​ಪ್ರೆಸ್​ ರೈಲು ಸೇವೆ ಪ್ರಾರಂಭಿಸಿದೆ.

ಯಶವಂತಪುರದಿಂದ ನ.3ರಿಂದ ಪ್ರತಿ ಬುಧವಾರ ಮತ್ತು ಶನಿವಾರದಂದು ಮಧ್ಯರಾತ್ರಿ 1.55ಕ್ಕೆ ಹೊರಡುವ ರೈಲು, ಮಾರನೇ ದಿನ ಮಧ್ಯಾಹ್ನ 3.50ಕ್ಕೆ ಚಂಡಿಗಢ ತಲುಪಲಿದೆ.

ಚಂಡಿಗಢದಿಂದ ನ.6ರಿಂದ ಪ್ರತಿ ಮಂಗಳವಾರ ಮತ್ತು ಶನಿವಾರದಂದು ಬೆಳಗಿನಜಾವ 3.35ಕ್ಕೆ ಹೊರಡುವ ರೈಲು, ಮಾರನೇ ದಿನ ಬೆಳಗ್ಗೆ 6.05ಕ್ಕೆ ಯಶವಂತಪುರ ತಲುಪಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net