ಅರ್ಧದಲ್ಲೇ ನಿಂತ ಪ್ಯಾಸೆಂಜರ್ ಟ್ರೈನ್, ಕೆಳಗಿಳಿದ ಪ್ರಯಾಣಿಕನ ಪ್ರಾಣ ತೆಗೆದ ಎಕ್ಸ್​ಪ್ರೆಸ್​ ರೈಲು! ಕೋಲಾರದಲ್ಲಿ ಘಟನೆ

New Project(1)
Published on

ಕೋಲಾರ: ಪ್ಯಾಸೆಂಜರ್​ ರೈಲಿಂದ ಇಳಿದು ಹಳಿ ಮೇಲೆ ಕುಳಿತಿದ್ದ ಪ್ರಯಾಣಿಕನಿಗೆ ಮತ್ತೊಂದು ರೈಲು ಡಿಕ್ಕಿ ಹೊಡೆದ ಪರಿಣಾಮ ಆ ಪ್ರಯಾಣಿಕ ಸ್ಥಳದಲ್ಲೇ ದುರಂತ ಅಂತ್ಯಕಂಡ ಘಟನೆ ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ಟೇಕಲ್ ಸ್ಟೇಷನ್​ನಲ್ಲಿ ಬುಧವಾರ ಬೆಳಗ್ಗೆ ಸಂಭವಿಸಿದೆ.

ಪ್ರಯಾಣಿಕರನ್ನು ತುಂಬಿಕೊಂಡು ಮಾರಿಕುಪ್ಪಂನಿಂದ ಬೆಂಗಳೂರಿನ ಕಡೆಗೆ ಹೊರಟಿದ್ದ ಸ್ವರ್ಣ ಟ್ರೈನ್, ಸಿಗ್ನಲ್ ಸಮಸ್ಯೆಯಿಂದ ಟೇಕಲ್ ಸ್ಟೇಷನ್​ನಲ್ಲಿ ಟ್ರ್ಯಾಕ್ ಮೇಲೆಯೇ ನಿಂತಿತ್ತು. ಈ ವೇಳೆ ಮೈಸೂರಿನಿಂದ ಚೆನ್ನೈ ಕಡೆಗೆ ಎಕ್ಸ್‌ಪ್ರೆಸ್‌ ರೈಲು ಹೋಗುತ್ತಿತ್ತು. ತಾಂತ್ರಿಕ ದೋಷದಿಂದ ಸ್ಥಗಿತಗೊಂಡ ರೈಲಿನಿಂದ ಪ್ರಯಾಣಿಕರು ಇಳಿಯುತ್ತಿದ್ದರು. ಮೈಸೂರಿನಿಂದ ಚೆನ್ನೈಗೆ ಹೋಗುತ್ತಿದ್ದ ರೈಲಿಗೆ ಸ್ವರ್ಣ ಟ್ರೈನಿನ ಪ್ರಯಾಣಿಕರು ಸಿಲುಕಿದ್ದಾರೆ. ಈ ದುರಂತದಲ್ಲಿ ಪ್ರಯಾಣಿಕನೊಬ್ಬ ಮೃತಪಟ್ಟಿದ್ದಾನೆ.

ಈ ದುರಂತಕ್ಕೆ ಸ್ಟೇಷನ್ ಮಾಸ್ಟರ್​ನ ನಿರ್ಲಕ್ಷ್ಯವೇ ಕಾರಣ ಎಂದು ಸ್ಥಳೀಯರು ಮತ್ತು ಇತರ ಪ್ರಯಾಣಿಕರು ಆಕ್ರೋಶ ಹೊರಹಾಕಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಕಂಟೋನ್ಮೆಂಟ್ ಪೊಲೀಸರು ಮೃತ ವ್ಯಕ್ತಿಯ ಮಾಹಿತಿ ಕಲೆ ಹಾಕುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net