

Elephant: ಕೀನ್ಯಾದಲ್ಲಿ ಸ್ಪ್ಯಾನಿಷ್ ದೇಶದ ಪ್ರವಾಸಿಗನೊಬ್ಬ ಆನೆಯ ಸೊಂಡಿಲಿಗೆ ಬಿಯರ್ ಸುರಿದು ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದು, ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಈ ಘಟನೆ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ಕೀನ್ಯಾದ ವನ್ಯಜೀವಿ ಅಭಯಾರಣ್ಯಕ್ಕೆ ಪ್ರವಾಸಿಗ ಭೇಟಿ ನೀಡಿದ್ದು, ಅಲ್ಲಿ ಬಿಯರ್ ಟಸ್ಕರ್ನ್ನು ಕುಡಿದು, ಉಳಿದ ಬಿಯರ್ನ್ನು ಆನೆಗೆ ಕುಡಿಸುತ್ತಿರುವುದನ್ನು ಈ ವಿಡಿಯೋ ತೋರಿಸುತ್ತಿದೆ.
ಈಗ ಅಳಿಸಲಾದ ಇನ್ಸ್ಟಾಗ್ರಾಮ್ ಪೋಸ್ಟ್ ನಲ್ಲಿ "ದಂತ ಸ್ನೇಹಿತನೊಂದಿಗೆ ಆನೆ" ಎಂಬ ಶೀರ್ಷಿಕೆಯೊಂದಿಗೆ ಈ ವಿಡಿಯೋವನ್ನು @skydive_kenya ಎಂಬ ಬಳಕೆದಾರ ತನ್ನ ಖಾತೆಯಲ್ಲಿ ಹಂಚಿಕೊಂಡಿದ್ದನು. ಹಿಂಸಾತ್ಮಕ ಕಮೆಂಟ್ಗಳ ನಂತರ ಆ ವ್ಯಕ್ತಿ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಳಿಸಿಹಾಕಿದ್ದಾನೆ.
ವಿಡಿಯೋದಲ್ಲಿರುವ ಆನೆಯನ್ನು ಬೂಪ ಎಂದು ಗುರುತಿಸಲಾಗಿದೆ. ಇದು ಗಂಡು ಆನೆಯಾಗಿದ್ದು, 1989 ರಲ್ಲಿ ಎಂಟನೇ ವಯಸ್ಸಿನಲ್ಲಿ ಆನೆಯನ್ನು ಅಭಯಾರಣ್ಯಕ್ಕೆ ತಂದಿದ್ದಾರೆ. ಇನ್ನು ಈ ದೃಶ್ಯವನ್ನು ಓಲ್ ಜೋಗಿ ಕನ್ಸರ್ವೆನ್ಸಿಯಲ್ಲಿ ಚಿತ್ರಿಸಲಾಗಿದ್ದು,ಈ ಸಂಬಂಧ ಕೀನ್ಯಾದ ಅಧಿಕಾರಿಗಳು ಪ್ರವಾಸಿಗನನ್ನು ತನಿಖೆ ನಡೆಸುತ್ತಿದ್ದಾರೆ. (ಏಜೆನ್ಸೀಸ್)