

ಕೇಂದ್ರಪಾರ: ಒಡಿಶಾದ ಕೇಂದ್ರಪಾರ ಜಿಲ್ಲೆಯ ಗಹಿರ್ವಥ ಬೀಚ್ನಲ್ಲಿ ಉಪಗ್ರಹ ಸಂರ್ಪತ ಟ್ರಾ್ಯಕಿಂಗ್ ಸಾಧನದೊಂದಿಗೆ ಟ್ಯಾಗ್ ಮಾಡಲಾಗಿದ್ದ ಆಲಿವ್ ರಿಡ್ಲಿ ಆಮೆಯೊಂದು 51 ದಿನಗಳಲ್ಲಿ ಸಮುದ್ರದಲ್ಲಿ ಸುಮಾರು 1,000 ಕಿಲೋಮೀಟರ್ ಪ್ರಯಾಣಿಸಿ ಆಂಧ್ರಪ್ರದೇಶದ ಕರಾವಳಿಯನ್ನು ತಲುಪಿದೆ.
ಟ್ರ್ಯಾಕಿಂಗ್ ಸಾಧನ ಅಳವಡಿಸಲಾಗಿದ್ದ ಆಮೆಯು ಶ್ರೀಲಂಕಾ, ತಮಿಳುನಾಡು ಮತ್ತು ಪುದುಚೇರಿಯ ಸಮುದ್ರ ನೀರಿನ ಮೂಲಕ ಸಾಗಿ ಒಟ್ಟು 51 ದಿನಗಳಲ್ಲಿ ಆಂಧ್ರಪ್ರದೇಶದ ಕರಾವಳಿಯನ್ನು ತಲುಪಿದೆ. ಭಾರತೀಯ ವನ್ಯಜೀವಿ ಸಂಸ್ಥೆಯ ಇತ್ತೀಚಿನ ಉಪಗ್ರಹ ಟ್ರಾ್ಯಕಿಂಗ್ ನಕ್ಷೆಯು ಆಂಧ್ರಪ್ರದೇಶದ ಸಮುದ್ರ ನೀರಿನಲ್ಲಿ ಚಲಿಸುವ ವೇಳೆ ಟ್ಯಾಗ್ ಮಾಡಲಾದ ಆಮೆಗಳಲ್ಲಿ ಒಂದನ್ನು ಪತ್ತೆಹಚ್ಚಲಾಗಿದೆ ಎಂದು ಅರಣ್ಯ ಪ್ರಧಾನ ಮುಖ್ಯ ಸಂರಕ್ಷಣಾಧಿಕಾರಿ ಪ್ರೇಮ್ ಶಂಕರ್ ಝಾ ತಿಳಿಸಿದ್ದಾರೆ.
ನಾಲ್ಕು ವರ್ಷಗಳ ಹಿಂದೆ ಒಡಿಶಾದಲ್ಲಿ ಟ್ರಾ್ಯಕಿಂಗ್ ಸಾಧನದೊಂದಿಗೆ ಟ್ಯಾಗ್ ಮಾಡಲಾಗಿತ್ತು. ಇತ್ತೀಚೆಗೆ ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಕಡಲತೀರದಲ್ಲಿ ಮೊಟ್ಟೆಗಳನ್ನು ಇಡಲು 3,500 ಕಿಲೋಮೀಟರ್ ಕ್ರಮಿಸಿತ್ತು. ಪ್ರತಿ ವರ್ಷ ಒಡಿಶಾ ಕರಾವಳಿಯಲ್ಲಿ ಆಲಿವ್ ರಿಡ್ಲಿ ಆಮೆಗಳು ಲಕ್ಷಾಂತರ ಸಂಖ್ಯೆಯಲ್ಲಿ ಸಾಮೂಹಿಕವಾಗಿ ಮೊಟ್ಟೆ ಇಡಲು ಬರುತ್ತದೆ. ಕೇಂದ್ರಪಾರ ಜಿಲ್ಲೆಯ ಬಂಗಾಳಕೊಲ್ಲಿಯ ಗಹಿರ್ವಥ ಸಮುದ್ರ ಭಾಗ ಆಮೆಗಳ ನೆಚ್ಚಿನ ಸ್ಥಳವೆಂದು ಗುರುತಿಸಲಾಗಿದೆ.
ವಾರ್ಷಿಕವಾಗಿ ಸುಮಾರು 3,000 ಆಮೆಗಳನ್ನು ಟ್ರಾ್ಯಕಿಂಗ್ ಸಾಧನದೊಂದಿಗೆ ಟ್ಯಾಗ್ ಮಾಡಲಾಗುತ್ತದೆ. ಅವುಗಳ ಸಂತಾನೋತ್ಪತ್ತಿ, ಜೀವಶಾಸ್ತ್ರ, ಚಲನೆ, ಬೆಳವಣಿಗೆ, ವಲಸೆ ಮಾರ್ಗ ಮತ್ತು ಆಹಾರ ಹುಡುಕುವ ಪ್ರದೇಶಗಳ ಬಗ್ಗೆ ಉತ್ತಮ ಮಾಹಿತಿಯನ್ನು ಪಡೆಯಲು ಕನಿಷ್ಠ 1 ಲಕ್ಷ ಆಮೆಗಳನ್ನು ಟ್ಯಾಗ್ ಮಾಡುವ ಅಗತ್ಯವಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಒಡಿಶಾ ಅರಣ್ಯ ಇಲಾಖೆ 1999 ರಲ್ಲಿ ಆಮೆಗಳಿಗೆ ಟ್ಯಾಗಿಂಗ್ ಮಾಡುವ ಕಾರ್ಯವನ್ನು ಕೈಗೆತ್ತಿಕೊಂಡಿತ್ತು. ನಂತರ ಟ್ಯಾಗಿಂಗ್ ಕಾರ್ಯ ಸ್ಥಗಿತಗೊಳಿಸಲಾಗಿತ್ತು. ಇದೀಗ ಭಾರತೀಯ ಪ್ರಾಣಿಶಾಸ್ತ್ರ ಸಮೀಕ್ಷೆ ವಿಭಾಗವು 2021 ರಲ್ಲಿ ಈ ಕಾರ್ಯವನ್ನು ಪುನರಾರಂಭಿಸಿದೆ.