ಮತ್ತೆ ಪೆಟ್ರೋಲ್​-ಡೀಸೆಲ್​ ದರ ಏರಿಕೆ: 14 ದಿನದಲ್ಲಿ 8.40 ರೂಪಾಯಿ ಹೆಚ್ಚಳ

Petrol price
Published on

ನವದೆಹಲಿ: ಇಂದೂ ಕೂಡ ಪ್ರತಿ ತೈಲ ಬೆಲೆ ಏರಿಕೆ ಮುಂದುವರಿದಿದೆ. ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ಸೋಮವಾರ ಲೀಟರ್​ ಪೆಟ್ರೋಲ್​ ಮತ್ತು ಡೀಸೆಲ್​ ಬೆಲೆ ತಲಾ 40 ಪೈಸೆ ಏರಿಸಿವೆ. ಇದರೊಂದಿಗೆ 14 ದಿನದಲ್ಲಿ 12ನೇ ಸಲ ಒಟ್ಟು 8.40 ರೂ. ತುಟ್ಟಿಯಾದಂತಾಗಿದೆ.

ನಾಲ್ಕೂವರೆ ತಿಂಗಳ ವಿರಾಮದ ನಂತರ ಮಾ.22ರಂದು ಮೊದಲ ಬಾರಿಗೆ ಉಭಯ ಇಂಧನಗಳ ಬೆಲೆ ಏರಿಸಲಾಗಿತ್ತು. ಅದಾದ ನಂತರ ಬಹುತೇಕ ಪ್ರತಿನಿತ್ಯ ಎನ್ನುವಂತೆ ದರ ಏರುತ್ತಲೇ ಇದೆ. ಭಾನುವಾರ 80 ಪೈಸೆ ಏರಿಕೆಯೊಂದಿಗೆ ದೆಹಲಿಯಲ್ಲಿ ಪ್ರತಿ ಲೀಟರ್​ ಪೆಟ್ರೋಲ್​ ಬೆಲೆ 103.41 ರೂ., ಡೀಸೆಲ್​ ದರ 94.67 ರೂ.ಗೆ ತಲುಪಿತ್ತು. ಇಂದು ಲೀಟರ್​ ಪೆಟ್ರೋಲ್​ ಬೆಲೆ 103.81 ರೂ., ಡೀಸೆಲ್​, 95.07 ರೂ. ಆಗಿದೆ. ಬೆಂಗಳೂರಲ್ಲಿ ಪ್ರತಿ ಲೀಟರ್​ ಪೆಟ್ರೋಲ್​ ಬೆಲೆ 109.41 ಹಾಗೂ ಡೀಸೆಲ್​ ದರ 93.23 ರೂ. ಆಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net