6 ತಿಂಗಳ ಹಿಂದೆ ಒಬ್ಬ, ಈಗ ಮತ್ತೊಬ್ಬ ಅದೇ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ! ಬೆಚ್ಚಿಬಿದ್ದ ಸ್ಥಳೀಯರು

tree
Published on

ತೀರ್ಥಹಳ್ಳಿ: ಗ್ರಾಮ ಪಂಚಾತಿಯಿ ಸದಸ್ಯರೊಬ್ಬರ ಮನೆಯಲ್ಲಿ ಟ್ರ್ಯಾಕ್ಟರ್​ ಚಾಲಕನಾಗಿದ್ದ ಯುವಕನೊಬ್ಬ ಮರಕ್ಕೆ ನೇಣು ಬಿಗಿದುಕೊಂಡು ಮೃತಪಟ್ಟಿದ್ದು, ಸ್ಥಳೀಯರಲ್ಲಿ ಭಯ ಹೆಚ್ಚಾಗಿದೆ. ಯಾಕಂದ್ರೆ ಈತ ನೇಣು ಬಿಗಿದುಕೊಂಡ ಮರದಲ್ಲೇ ಮತ್ತೊಬ್ಬ ವ್ಯಕ್ತಿ 6 ತಿಂಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದ!

ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಕುಕ್ಕೆ ಬಾಂಡ್ಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾಲೆ ಜನಗಲ್​ನಲ್ಲಿ ಈ ಘಟನೆ ಸಂಭವಿಸಿದೆ. ಶನಿವಾರ(ನ.20) ಗದಗ ಮೂಲದ ಶರಣ(25) ಎಂಬಾತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈತ ಮೂರ್ನಾಲ್ಕು ವರ್ಷದಿಂದ ಗ್ರಾಪಂ ಸದಸ್ಯ ಪ್ರವಿಣ್​ ಮನೆಯಲ್ಲಿ ಟ್ರ್ಯಾಕ್ಟರ್​ ಚಾಲಕನಾಗಿದ್ದ. 6 ತಿಂಗಳ ಹಿಂದೆ ಎನ್​.ಆರ್​.ಪುರದ ಶ್ರೀನಿವಾಸ್​ ಎಂಬಾತ ಇದೇ ಮರಕ್ಕೆ ನೇಣು ಹಾಕಿಕೊಂಡು ಮೃತಪಟ್ಟಿದ್ದ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net