BBK S10: 'ರಣಶಕ್ತಿ' ತಂಡದಲ್ಲಿ ಭಿನ್ನಾಭಿಪ್ರಾಯ!; ಹೀಗಾದ್ರೆ ಈ ವಾರದ ಟಾಸ್ಕ್​ ಸೋಲುವುದು ಖಚಿತ?

Untitled design - 2023-10-18T163545.347
Published on

ಬೆಂಗಳೂರು: ಬಿಗ್‌ ಬಾಸ್‌ ಕನ್ನಡ ಹತ್ತನೇ ಸೀಸನ್‌ನ ವಾರಾಂತ್ಯದ ಮೊದಲ ವಾರದ ಪಂಚಾಯಿತಿ ಕಟ್ಟೆಯನ್ನು ಯಶಸ್ವಿಯಾಗಿ ನಡೆಸಿಕೊಟ್ಟ ನಟ, ನಿರೂಪಕ ಕಿಚ್ಚ ಸುದೀಪ್​ ಬಿಗ್​ ಮನೆಯ ಬಿಗ್​ ಸ್ಪರ್ಧಿಗಳಿಗೆ ತಮ್ಮ ಖಡಕ್ ಮಾತಲ್ಲೇ ಅವರವರ ತಪ್ಪುಗಳನ್ನು ಅರ್ಥೈಸಿ, ಆಟವನ್ನು ಅದ್ಬುತವಾಗಿ ಆಡಿದವರಿಗೆ ಮೆಚ್ಚುಗೆಯನ್ನು ಕೂಡ ವ್ಯಕ್ತಪಡಿಸಿದರು. ಇದೀಗ ಎರಡನೇ ವಾರಕ್ಕೆ ಕಾಲಿಟ್ಟ ಸ್ಪರ್ಧಿಗಳು ಎರಡು ತಂಡಗಳಾಗಿ ವಿಂಗಡನೆಯಾಗಿದ್ದು, ಟಾಸ್ಕ್​ ಮೂಲಕ ಅಸಲಿ ಆಟಕ್ಕೆ ಹೆಜ್ಜೆಯಿಟ್ಟಿದ್ದಾರೆ.

ವಾರದ ಮೊದಲ ದಿನವಾದ ಸೋಮವಾರ ಎಲಿಮಿನೇಟ್​ ಆಗಲು ನಾಮಿನೇಟ್​ ಆದ ಸದಸ್ಯರನ್ನು ಉಳಿಸಿಕೊಳ್ಳಲು ಮನೆಯವರಿಗೆ ಟಾಸ್ಕ್​ ಕೊಟ್ಟಿದ್ದ ಬಿಗ್​ ಬಾಸ್​, ತದನಂತರ ಮನೆಯ ಒಟ್ಟು ಸದಸ್ಯರನ್ನು ಎರಡು ತಂಡಗಳನ್ನಾಗಿ ರೂಪಿಸಿದರು. ‘ರಣಶಕ್ತಿ’ ತಂಡಕ್ಕೆ ಕಾರ್ತಿಕ್​ ನಾಯಕನಾದರೆ, ‘ಮಾಣಿಕ್ಯ’ ತಂಡಕ್ಕೆ ವಿನಯ್ ಕ್ಯಾಪ್ಟನ್​ ಆಗಿ ಆಟವಾಡಿದರು. ಎರಡು ತಂಡಗಳ ನಡುವೆ ನಡೆದ ನೇರ ಹಣಾಹಣಿಯಲ್ಲಿ ವಿನಯ್​ ನೇತೃತ್ವದ ಮಾಣಿಕ್ಯ ತಂಡ ಜಯಭೇರಿಯಾಯಿತು.

ಟಾಸ್ಕ್​ ನಡುವೆ ನಡೆಯದ ಮಾತಿನ ಜಟಾಪಟಿ ಟಾಸ್ಕ್ ಮುಗಿದ ಮೇಲೆ ಕ್ಯಾಪ್ಟನ್​ ವಿನಯ್​ ಮತ್ತು ಸಂಗೀತ ಶೃಂಗೇರಿ ನಡುವೆ ನಡೆಯಿತು. ಒಂದು ಹೇಳಿಕೆಯಲ್ಲಿ ಪ್ರಾರಂಭಗೊಂಡ ಮಾತಿನ ಸಮರ, ತೀವ್ರ ವಾಗ್ವಾದಕ್ಕೆ ತಿರುಗಿತು. ವಿನಯ್​ ನಿಮ್ಮ ಧ್ವನಿ ಬೆದರಿಕೆ ರೀತಿಯಿದೆ ಎಂದು ನೇರವಾಗಿ ಹೇಳಿದ ಸಂಗೀತಾಗೆ ವಿನಯ್​ ಖಡಕ್ ಆಗಿ ಉತ್ತರಿಸಿದರು. ಈ ಘಟನೆಯ ಬಳಿಕ ರಣಶಕ್ತಿ ತಂಡದ ಸದಸ್ಯರ ನಡುವೆಯೇ ಭಿನ್ನಾಭಿಪ್ರಾಯ ಮೂಡಿದ್ದು, ಒಬ್ಬರನೊಬ್ಬರು ದೂಷಿಸಿ ಮಾತನಾಡುತ್ತಿದ್ದಾರೆ.

ಸದ್ಯ ಈ ಮನಸ್ತಾಪ, ಭಿನ್ನಾಭಿಪ್ರಾಯಗಳು ಹೀಗೆ ಮುಂದುವರೆದರೆ ಈ ವಾರದ ಮುಂದಿನ ಟಾಸ್ಕ್​ಗಳನ್ನು ಹೇಗೆ ಆಡಲಿದ್ದಾರೆ? ಒಗ್ಗಟಿನಿಂದ ಗೆಲುವು ಪಡೆಯಲಿದ್ದಾರ ಎಂಬುದನ್ನು ಕಾದು ನೋಡಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net