More

    ಅ.23 ಪ್ರಭಾಸ್​ ಜನ್ಮದಿನ; ರೆಬೆಲ್​ ನಟನ ಫ್ಯಾನ್ಸ್​ಗಾಗಿ ರಿ-ರಿಲೀಸ್​ ಆಗಲಿದೆ ಈ ಸೂಪರ್​ ಹಿಟ್​ ಸಿನಿಮಾ!

    ಆಂಧ್ರಪ್ರದೇಶ: ಟಾಲಿವುಡ್​ನ ರೆಬೆಲ್​ ಸ್ಟಾರ್​, ಪ್ಯಾನ್​ ಇಂಡಿಯಾ ನಟ ಡಾರ್ಲಿಂಗ್​ ಪ್ರಭಾಸ್​ ಅವರ 44ನೇ ಜನ್ಮದಿನಕ್ಕೆ ಸದ್ಯ ದಿನಗಣನೆ ಆರಂಭಗೊಂಡಿದ್ದು, ಈ ಮಧ್ಯೆ ಅವರ ಅಭಿಮಾನಿಗಳನ್ನು ಖುಷಿ ಪಡಿಸುವ ಸಲುವಾಗಿ ಈ ಹಿಂದೆ ಪ್ರಭಾಸ್​ ನಟಿಸಿದ್ದ ಸಿನಿಮಾವನ್ನು ರಿ-ರಿಲೀಸ್ ಮಾಡಲು ಚಿತ್ರತಂಡ ಸಜ್ಜಾಗಿದೆ.

    ಇದನ್ನೂ ಓದಿ: ಸ್ವಯಂ ಚಾಲನಾ ಗಸ್ತು ಕಾರು ಅನಾವರಣ; ಭದ್ರತೆಯನ್ನು ಹೆಚ್ಚಿಸಲು ಹೊಸ ಹೆಜ್ಜೆ ಇಟ್ಟ ಪೊಲೀಸರು

    ಪ್ರಭಾಸ್ ಮತ್ತು ಭಾರತದ ಸ್ಟಾರ್​ ನಿರ್ದೇಶಕ ಎಸ್‌.ಎಸ್. ರಾಜಮೌಳಿ ಅವರ ಕಾಂಬಿನೇಷ್​ನಲ್ಲಿ 2005ರಲ್ಲಿ ಬಿಡುಗಡೆಗೊಂಡು ಸೂಪರ್​ ಹಿಟ್​ ಆಗಿದ್ದ ‘ಛತ್ರಪತಿ’ ಚಿತ್ರವನ್ನು ಇದೀಗ ಮತ್ತೊಮ್ಮೆ ತೆರೆ ಮೇಲೆ ತರಲು ಚಿತ್ರತಂಡ ನಿರ್ಧರಿಸಿದೆ. ಗಲ್ಲಾಪೆಟ್ಟಿಗೆಯಲ್ಲಿ ಬ್ಲಾಕ್​ಬಸ್ಟರ್​ ಆಗಿದ್ದ ಈ ಚಿತ್ರದಲ್ಲಿ ಪ್ರಭಾಸ್​ ಮತ್ತು ನಟಿ ಶ್ರಿಯಾ ಸರನ್ ಮುಖ್ಯಭೂಮಿಕೆಯಲ್ಲಿ ಮಿಂಚಿದ್ದರು.

    ಅಕ್ಟೋಬರ್ 23, 2023 ರಂದು ನಟ ಪ್ರಭಾಸ್ ತಮ್ಮ 44ನೇ ವಸಂತಕ್ಕೆ ಕಾಲಿಡಲಿದ್ದು, ಈ ಸಂಗತಿ ಅವರ ಅಪಾರ ಸಂಖ್ಯೆಯ ಅಭಿಮಾನಿಗಳಿಗೆ ಭಾರೀ ಸಂತಸ ಮತ್ತು ಕಾತರ ಹೆಚ್ಚಿಸಿದೆ. ಪ್ರಭಾಸ್​ ಜನ್ಮದಿನದಂದೇ ‘ಛತ್ರಪತಿ’ ಸಿನಿಮಾ 4K ಆವೃತ್ತಿಯಲ್ಲಿ ಬಿಡುಗಡೆಯಾಗಲಿದ್ದು, ಶೀಘ್ರದಲ್ಲೇ ಬುಕಿಂಗ್  ತೆರೆಯಲಿದೆ.

    ಇದನ್ನೂ ಓದಿ:  46ನೇ ಕಾಲಿಟ್ಟ ಕಾವೇರಿ ಹೋರಾಟ: ರೈತ ಹಿತರಕ್ಷಣಾ ಸಮಿತಿ ಪ್ರತಿಭಟನೆಗೆ ಬೆಂಬಲ

    ಬಿವಿಎಸ್ಎನ್ ಪ್ರಸಾದ್ ನಿರ್ಮಾಣದ ಈ ಚಿತ್ರದಲ್ಲಿ ಭಾನು ಪ್ರಿಯಾ, ಪ್ರದೀಪ್ ರಾವತ್, ಕೋಟಾ ಶ್ರೀನಿವಾಸ ರಾವ್, ಜಯಪ್ರಕಾಶ್ ರೆಡ್ಡಿ ಮುಂತಾದವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಪ್ರಭಾಸ್​-ರಾಜಮೌಳಿ ಕಾಂಬಿನೇಷನ್​ನ ಈ ಸಿನಿಮಾಗೆ ಆಸ್ಕರ್​ ವಿಜೇತ ಎಂ.ಎಂ.ಕೀರವಾಣಿ ಸಂಗೀತ ಸಂಯೋಜನೆ ಮಾಡಿದ್ದಾರೆ,(ಏಜೆನ್ಸೀಸ್).

    VIDEO | ಕೂಲಿ ಕಾರ್ಮಿಕನ ಬಳಿ 3200 ರೂ. ಲಪಟಾಯಿಸಿದ ಖದೀಮರು; ಕತ್ತುಹಿಸುಕಿ ಪರಾರಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts