ವೈದ್ಯಲೋಕದಲ್ಲೊಂದು ಅಚ್ಚರಿ; ತನಗೆ ತಾನೆ ಸಂತಾನಶಸ್ತ್ರ ಹರಣ ಚಿಕಿತ್ಸೆ ಮಾಡಿಕೊಂಡ ವೈದ್ಯ! ವಿಡಿಯೋ ವೈರಲ್​ | Vasectomy

dk (42)
Published on

ಸಾಮಾನ್ಯವಾಗಿ ರೋಗಿಗಳಿಗೆ ಆಪರೇಷನ್​ ಮಾಡುವ ವೈದ್ಯರನ್ನು ನಾವು ನೋಡಿದ್ದೇವೆ. ಎಲ್ಲಾದರೂ ವೈದ್ಯರೇ ತಮಗೆ ತಾವೇ ಸ್ವಂತವಾಗಿ ಅಪರೇಷನ್ ಮಾಡಿಕೊಳ್ಳುವುದನ್ನು ನೋಡಿದ್ದೀರಾ? ಹೌದು ಡಾಕ್ಟರೇ ತಮಗೆ ತಾವೇ ಸಂತಾನ ಶಸ್ತ್ರ ಹರಣ(Vasectomy) ಮಾಡಿಕೊಂಡಿರುವ ವಿಚಿತ್ರ ಘಟನೆ ನಡೆದಿದೆ.

ತೈವಾನ್​ ಮೂಲದ ವೈದ್ಯ ಚೆನ್​-ವಿ-ನಾಂಗ್​ ಎಂಬ ಪಾಸ್ಟಿಕ್​​ ಸರ್ಜನ್​, ರಾಜಧಾನಿ ತೈಪೆ ನಗರದಲ್ಲಿ ತಮ್ಮದೆ ಆದ ಕ್ಲಿನಿಕ್​ನಲ್ಲಿ ತಮಗೆ ತಾವೇ ಸಂತಾನಶಸ್ತ್ರ ಹರಣ ಮಾಡಿಕೊಂಡು, ಇದರ ಬಗ್ಗೆ ವಿಡಿಯೋ ಮಾಡಿ ಫೇಸ್​ಬುಕ್​ನಲ್ಲಿ ಹಂಚಿಕೊಂಡಿದ್ದಾರೆ.

ಮೂರು ಮಕ್ಕಳ ತಂದೆಯಾಗಿರುವ ಚೆನ್​, ತನ್ನ ಹೆಂಡತಿಗೆ ಮಕ್ಕಳ ಸಾಕು ಎಂದು ಹೇಳಿದ್ದಳು. ಹೀಗಾಗಿ, ಇತ ತನ್ನ ಪತ್ನಿಯನ್ನು ಮೆಚ್ಚಿಸುವುದಕ್ಕಾಗಿ ಈ ಚಿಕಿತ್ಸೆ ಮಾಡಿಕೊಂಡಿದ್ದಾನೆ ಎಂದು ವರದಿಗಳು ಉಲ್ಲೇಖಿಸಿದ್ದಾನೆ.

ಈ ಚಿಕಿತ್ಸೆ ನಡೆಯಲು ಒಟ್ಟು 11 ಪ್ರಕ್ರಿಯಿಗಳಿದ್ದು, ಒಂದೊಂದು ಬಗ್ಗೆ ವೈದ್ಯ ಚೆನ್​ ವಿಡಿಯೋದಲ್ಲಿ ವಿವರಿಸಿದ್ದಾರೆ. ಚೆನ್ ಸ್ಥಳೀಯ ಅರಿವಳಿಕೆ(Anaesthesia) ನೀಡಿಕೊಂಡು ಶಸ್ತ್ರಚಿಕಿತ್ಸೆಯನ್ನು ಆರಂಭಿಸಿದ್ದಾರೆ. ಆದಾಗ್ಯೂ, ಸ್ವತಃ ಶಸ್ತ್ರಚಿಕಿತ್ಸೆ ಮಾಡುವುದು ಅಷ್ಟು ಸುಲಭವಲ್ಲ, ಇಂತಹ ಕಾರ್ಯಕ್ಕೆ ಮುಂರದಾಗಿದ್ದ ಚೆನ್​, ಸಾಮಾನ್ಯವಾಗಿ ಕೇವಲ 15 ನಿಮಿಷಗಳನ್ನು ತೆಗೆದುಕೊಳ್ಳುವ ಶಸ್ತ್ರಚಿಕಿತ್ಸೆ ಪೂರ್ಣಗೊಳ್ಳಲು ಒಂದು ಗಂಟೆ ಕಾಲವಕಾಶ ಬೇಕಾಗಿತು ಎಂದು ಹೇಳಿದ್ದಾನೆ. ಕೊನೆಗೂ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದು, ಚೆನ್ ಆರೋಗ್ಯದಿಂದ ಇದ್ದಾನೆ ಎಂದು ಹೇಳಲಾಗಿದೆ.

ಇದೀಗ ಈ ಶಸ್ತ್ರ ಚಿಕಿತ್ಸೆಯ ವಿಡಿಯೋ ವೈರಲ್ ಆಗಿದ್ದು, 40 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ. ಚೆನ್​ ಧೈರ್ಯ ಮತ್ತು ಪತ್ನಿಯ ಮೇಲಿನ ಪ್ರೀತಿಯನ್ನು ಹಲವರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಆದರೆ, ಇನ್ನು ಹಲವರು ಕಳವಳ ವ್ಯಕ್ತಪಡಿಸಿದ್ದಾರೆ. ಈ ರೀತಿ ಮಾಡುವುದು ಸುರಕ್ಷಿತವಲ್ಲ, ಗಂಭೀರ ಅಪಘಾತ ಸಂಭವಿಸಬಹುದು ಎಂದು ನೆಟ್ಟಿಗರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net