ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ

sucide
Published on

ಬೆಂಗಳೂರು: ಮಹಡಿಯಿಂದ ಜಿಗಿದು ವಿದ್ಯಾರ್ಥಿಯೊಬ್ಬ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಸುಮಿತ್ ಎಂಬುವರ ಪುತ್ರ ಆದಿವ್ (೧೬) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ.

ಹೆಣ್ಣೂರು ಬಳಿಯ ಗೆದ್ದಲಹಳ್ಳಿಯಲ್ಲಿನ ಮಂತ್ರಿ ಅಪಾರ್ಟ್‌ಮೆಂಟ್‌ನಲ್ಲಿ ಭಾನುವಾರ ತಡರಾತ್ರಿ ಈ ಘಟನೆ ನಡೆದಿದೆ.

ಬಾಲಕನ ಪಾಲಕರು ಉತ್ತರ ಪ್ರದೇಶ ಮೂಲದವರಾಗಿದ್ದು, ಕಳೆದ ೧೫ ವರ್ಷಗಳಿಂದ ನಗರದಲ್ಲಿ ವಾಸವಿದ್ದಾರೆ. ಖಾಸಗಿ ಶಾಲೆಯಲ್ಲಿ ೧೧ ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಆದಿವ್‌ಗೆ ಕ್ರಿಕೇಟ್‌ನಲ್ಲಿ ಹೆಚ್ಚಿನ ಆಸಕ್ತಿ ಇತ್ತು. ಆದರೆ ಈ ಶಾಲೆಯಲ್ಲಿ ಕ್ರಿಕೇಟ್‌ಗೆ ಆಯ್ಕೆಯಾಗಿರಲಿಲ್ಲ. ಇದರಿಂದಾಗಿ ಬೇಸರಗೊಂಡಿದ್ದ ಹೀಗಾಗಿ ಶಾಲೆಯನ್ನು ಬದಲಾಯಿಸುವಂತೆ ಇತ್ತೀಚೆಗೆ ಕುಟುಂಬ ಸದಸ್ಯರ ಜತೆ ಚರ್ಚಿಸಿದ್ದ. ಇದೇ ವಿಚಾರವಾಗಿ ಭಾನುವಾರ ಬೆಳಗ್ಗೆ ತಂದೆ-ಮಗನ ನಡುವೆ ವಾಗ್ವಾದ ಕೂಡ ಆಗಿತ್ತು.ಇದರಿಂದ ಬೇಸರಗೊಂಡು ಮಧ್ಯಾಹ್ನ ಮನೆಯಿಂದ ಹೊರಗಡೆ ಹೋಗಿದ್ದ. ಸಂಜೆಯಾದರೂ ಮನೆಗೆ ವಾಪಸ್ ಬಂದಿರಲಿಲ್ಲ. ಪಾಲಕರು ೆನ್ ಮಾಡಿದ್ದಾಗ ರಾತ್ರಿವರೆಗೂ ಮಾತನಾಡಿದ್ದಾನೆ ಮನೆಗೆ ಹಿಂತಿರುಗುವುದಾಗಿ ಹೇಳಿದ್ದಾನೆ. ಮಗ ಮತ್ತೆ ವಾಪಸ್ ಬರಬಹುದು ಅಂತಾ ಪಾಲಕರು ತಡರಾತ್ರಿವರೆಗೂ ಆತನಿಗಾಗಿ ಕಾದಿ ಕುಳಿತ್ತಿದ್ದಾರೆ. ನಂತರ ತಡರಾತ್ರಿ ೧ ಗಂಟೆಗೆ ಅಪಾರ್ಟ್‌ಮೆಂಟ್‌ಗೆ ಬಂದಿದ್ದು ೧.೩೦ ಕ್ಕೆ ಅಪಾರ್ಟ್‌ಮೆಂಟ್‌ನ ೭ ಮಹಡಿಗೆ ತೆರಳಿ ಹಾರಿ ಬಿದ್ದಿದ್ದಾನೆ. ವಿಷಯ ತಿಳಿದು ಸ್ಥಳಕ್ಕೆ ಹೆಣ್ಣೂರು ಠಾಣೆ ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸಿ ಮೃತ ದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬ ಸದ್ಯರಿಗೆ ಹಸ್ತಾಂತರಿಸಿದ್ದಾರೆ.

ಓದಿನಲ್ಲಿ ಮುಂದಿದ್ದ ಆದಿವ್, ಕ್ರಿಕೆಟ್ ಆಡುವುದನ್ನು ಹೆಚ್ಚಾಗಿ ಇಷ್ಟಪಡುತ್ತಿದ್ದ. ಆತ್ಮಹತ್ಯೆಗೂ ಮುನ್ನ ಆತ ಯಾವುದೇ ಡೆತ್‌ನೋಟ್ ಬರೆದಿಟ್ಟಿಲ್ಲ. ಶಾಲೆ ಬದಲಿಸುವ ವಿಚಾರಕ್ಕೆ ತಂದೆಯೊಂದಿಗೆ ಮನಸ್ತಾಪ ಉಂಟಾದ ಕಾರಣಕ್ಕೆ ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ. ಸುಮಿತ್ ದಂಪತಿಗೆ ಆದಿವ್ ಒಬ್ಬನೇ ಮಗ. ಸುಮಿತ್, ನಗರದ ಸ್‌ಟಾವೇರ್ ಕಂಪನಿಯಲ್ಲಿ ಇಂಜಿನಿಯರ್ ಆಗಿದ್ದಾರೆ. ಅವರ ಪತ್ನಿ ಗೃಹಿಣಿ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಸಂಬಂಧ ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net