ಮಾನವ ಮುಖವನ್ನೇ ಹೋಲುವ ವಿಚಿತ್ರ ಕರುವಿನ ಜನನ..!

calf
ಸಾಂದರ್ಭಿಕ ಚಿತ್ರ
Published on

ಅನಕಾಪಲ್ಲಿ: ಮನುಷ್ಯನ ಮುಖದ ರೀತಿಯಲ್ಲಿಯೇ ಎಮ್ಮೆಯೊಂದು ಕರುವಿಗೆ ಜನ್ಮ ನೀಡಿರುವ ವಿಚಿತ್ರ ಘಟನೆ ಆಂಧ್ರಪ್ರದೇಶದ ಅನಕಾಪಲ್ಲಿ ಜಿಲ್ಲೆಯ ಎಎಲ್ ಪುರಂ ಗ್ರಾಮದಲ್ಲಿ ನಡೆದಿದೆ.

ಗೋಲುಗೊಂಡ ಮಂಡಲದ ಎಎಲ್ ಪುರಂ ಗ್ರಾಮದ ವಬ್ಬಲ ರೆಡ್ಡಿ ಪೋತುರಾಜು ಎಂಬ ರೈತನ ಮನೆಯಲ್ಲಿ ಈ ವಿಚಿತ್ರ ಕರು ಜನಿಸಿದ್ದು, ಸ್ಥಳೀಯವಾಗಿ ಚರ್ಚೆಗೆ ಗ್ರಾಸವಾಗಿದೆ. ವಿಚಿತ್ರ ಕರುವನ್ನು ನೋಡಲು ಸ್ಥಳೀಯರು ಹಾಗೂ ಸುತ್ತಮುತ್ತಲಿನ ಜನರು ರೈತನ ಮನೆಗೆ ಮುಗಿಬಿದ್ದಿದ್ದಾರೆ. ಎಮ್ಮೆ ಇಂದು ಬೆಳಿಗ್ಗೆ ಏಕಾ ಏಕಿ ಅಸ್ವಸ್ಥಗೊಂಡಿದ್ದು, ಇದರಿಂದ ಆತಂಕಗೊಂಡ ರೈತ ಕೂಡಲೇ ಪಶು ವೈದ್ಯಾಧಿಕಾರಿ ಸಿರಿಶಾ ಎಂಬುವರಿಗೆ ಮಾಹಿತಿ ನೀಡಿದ್ದಾರೆ.

strange calf

ಕೂಡಲೇ ಸ್ಥಳಕ್ಕಾಗಮಿಸಿದ ಪಶು ಸಿಬ್ಬಂದಿಗಳ ಸಹಾಯದಿಂದ ಕರುವನ್ನು ಹೊರತೆಗೆಯಲಾಯಿತು. ಹುಟ್ಟಿದ ಕರುವಿನ ತಲೆ ಮನುಷ್ಯನಂತೆ ಕಂಡಿದ್ದನ್ನು ಬೆಚ್ಚಿ ಬಿದ್ದಿದ್ದು, ದುರದೃಷ್ಟವಶಾತ್ ಕರು ಮೃತಪಟ್ಟಿದೆ. ಆದರೆ ತಾಯಿ ಎಮ್ಮೆ ಸುರಕ್ಷಿತವಾಗಿದ್ದು, ಆನುವಂಶಿಕ ದೋಷದಿಂದ ಇಂತಹ ಕರುಗಳು ಜನಿಸುತ್ತವೆ ಎಂದು ವೈದ್ಯರು ಹೇಳಿದ್ದಾರೆ.

ವಾರದ ಹಿಂದೆಯೂ ಕೂಡ ತೆಲಂಗಾಣದ ಮಹೆಬೂಬ್‌ನಗರ ಜಿಲ್ಲೆಯ ದಾಮರಗಿಡ್ಡ ಮಂಡಲ ವ್ಯಾಪ್ತಿಯ ಅಣ್ಣಾಸಾಗರ ಗ್ರಾಮದಲ್ಲಿ ರೈತ ಚಂದ್ರಯ್ಯಗೌಡರ ಹಸು ಕರುವಿಗೆ ಜನ್ಮ ನೀಡಿತ್ತು. ಆದರೆ ಹುಟ್ಟಿದ ಕರುವಿಗೆ ಮೂತಿ ಮತ್ತು ಮೂಗು ಇರಲಿಲ್ಲ.(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net