ರಾಜ್ಯದ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಸಂಕಲ್ಪ: ಬೇಲೂರು, ಹಳೆಬೀಡು ಸ್ಮಾರಕಗಳನ್ನು ಯುನೆಸ್ಕೋಗೆ ಸೇರಿಸಲು ಕ್ರಮ

pattadakallu ihole
Published on

ಬೆಂಗಳೂರು: ರಾಜ್ಯದ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಸಂಕಲ್ಪ ಮಾಡಿರುವ ರಾಜ್ಯ ಸರ್ಕಾರ, ಪ್ರಸಕ್ತ ಬಜೆಟ್​ನಲ್ಲಿ ಇದಕ್ಕೆ ವಿಶೇಷ ಆದ್ಯತೆ ನೀಡಿದೆ. ಬೇಲೂರು, ಹಳೆಬೀಡು ಸ್ಮಾರಕಗಳನ್ನು ಯುನೆಸ್ಕೋಗೆ ಸೇರಿಸಲು ಕ್ರಮ ಕೈಗೊಳ್ಳುವುದಾಗಿ ಹೇಳಿರುವ ಸಿಎ ಬೊಮ್ಮಾಯಿ, ವಿವಿಧ ಯೋಜನೆಗೆ ಕೋಟ್ಯಂತರ ಅನುದಾನ ಮೀಸಲಿಟ್ಟಿದ್ದಾರೆ.

  • ಹಂಪಿ, ಬಾದಾಮಿ, ಐಹೊಳೆ, ಪಟ್ಟದಕಲ್ಲು, ವಿಜಯಪುರ ಪ್ರವಾಸಿ ವೃತ್ತ ಅಭಿವೃದ್ಧಿ
  • ಜೋಗ ಜಲಪಾತ ಬಳಿ ಹೋಟೆಲ್ ಮತ್ತು ರೋಪ್ ​ವೇಗಾಗಿ 116 ಕೋಟಿ ರೂ. ಮೀಸಲು
  • ನಂದಿ ಬೆಟ್ಟದಲ್ಲಿ ರೋಪ್​ ವೇ ನಿರ್ಮಾಣಕ್ಕೆ 93 ಕೋಟಿ ರೂ.
  • ಅಂಜನಾದ್ರಿ ಬೆಟ್ಟಕ್ಕೆ 100 ಕೋಟಿ ರೂ. ವೆಚ್ಚದಲ್ಲಿ ಯೋಜನೆ
  • ಪರ್ವತಮಾಲಾ ಯೋಜನೆಯಡಿ ಚಾಮುಂಡಿ ಬೆಟ್ಟಕ್ಕೆ ರೋಪ್ ವೇ
  • ರಾಜ್ಯದ 15 ಪ್ರವಾಸಿ ತಾಣಗಳ AR/VR ತುಣುಕುಗಳನ್ನು 15 ಕೋಟಿ ರೂ. ವೆಚ್ಚದಲ್ಲಿ ಸೃಜಿಸಲು ಉದ್ದೇಶಿಸಿದ್ದು, ಪ್ರಾಯೋಗಿಕವಾಗಿ ಮೈಸೂರು ಅರಮನೆಯ ತುಣುಕು ಸೃಜಿಸುವುದು
  • ಉತ್ತರ ಕನ್ನಡ ಜಿಲ್ಲೆಯ ಯಾಣದಲ್ಲಿ ಖಾಸಗಿ ಸಹಭಾಗಿತ್ವದೊಂದಿಗೆ ರೋಪ್‍ವೇ ನಿರ್ಮಿಸಲು ಯೋಜನೆ
  • ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಹಾಗೂ ಚಿಕ್ಕಮಗಳೂರಿನ ಮುಳ್ಳಯ್ಯನಗಿರಿ ದತ್ತಪೀಠ ಬೆಟ್ಟದಲ್ಲಿ ರೋಪ್‍ವೇ ನಿರ್ಮಾಣ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net