ಮಹರ್ಷಿ ವಾಲ್ಮೀಕಿ ಪ್ರಶಸ್ತಿ ಪ್ರಕಟ, 11 ಮಂದಿ ಆಯ್ಕೆ: ಸಚಿವ ಬಿ.ಶ್ರೀರಾಮುಲು ಮಾಹಿತಿ

B Sriramulu
Published on

ಬೆಂಗಳೂರು: ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದವರಿಗೆ ಕೊಡ ಮಾಡುವ 'ಶ್ರೀ ಮಹರ್ಷಿ ವಾಲ್ಮೀಕಿ ಪ್ರಶಸ್ತಿ'ಗೆ ಆಯ್ಕೆಯಾದವರ ಹೆಸರುಗಳನ್ನು ಸಚಿವ ಬಿ‌.ಶ್ರೀರಾಮುಲು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಪ್ರಕಟಿಸಿದರು.

ಮಹರ್ಷಿ ವಾಲ್ಮೀಕಿ ಜಯಂತಿ ಹಿನ್ನೆಲೆಯಲ್ಲಿ 2020ನೇ ಸಾಲಿಗೆ ಐದು ಜನ ಹಾಗೂ 2021ನೇ ಸಾಲಿಗೆ‌ ಆರು ಜ‌ ಸೇರಿದಂತೆ ಒಟ್ಟು 11 ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ವಿಧಾನಸೌಧದ ಬ್ಯಾಂಕ್ವೆಟ್ ಹಾಲ್​ನಲ್ಲಿ ಬುಧವಾರ ಬೆಳಗ್ಗೆ 11ಕ್ಕೆ ಆಯೋಜಿಸಿರುವ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಆಯ್ಕೆಯಾದ ಸಾಧಕರಿಗೆ ಪ್ರಶಸ್ತಿ ಪ್ರದಾನವಾಗಲಿದೆ. ಪ್ರಶಸ್ತಿ ಪುರಸ್ಕೃತರಿಗೆ ಐದು ಲಕ್ಷ ರೂಪಾಯಿ ನಗದು‌ ಹಾಗೂ 20 ಗ್ರಾಂ ಚಿನ್ನದ ಪದಕ ಜತೆಗೆ ಪ್ರಶಸ್ತಿ ಫಲಕವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೀಡಲಿದ್ದಾರೆ ಎಂದು ವಿವರಿಸಿದರು.

ಶ್ರೀ ಮಹರ್ಷಿ ವಾಲ್ಮೀಕಿ ಪ್ರಶಸ್ತಿಗೆ ಆಯ್ಕೆಯಾದವರ ಪಟ್ಟಿ ಇಲ್ಲಿದೆ

2021ನೇ ಸಾಲಿನ ಪ್ರಶಸ್ತಿಗೆ ಆಯ್ಕೆಯಾದವರು

ಕೆ.ಸಿ. ನಾಗರಾಜ್(ಬೆಂಗಳೂರು)- ಸಾಮಾಜಿಕ ಕ್ಷೇತ್ರ

ಲಕ್ಷ್ಮೀ ಗಣಪತಿ ಸಿದ್ದಿ(ಬೆಳಗಾವಿ)- ನಾಟಿ ವೈದ್ಯ

ಪ್ರೊ.ಎಸ್.ಆರ್. ನಿರಂಜನ್(ಮೈಸೂರು)- ಶಿಕ್ಷಣ ಕ್ಷೇತ್ರ

ಭಟ್ರಹಳ್ಳಿ ಗೂಳಪ್ಪ (ಕಲಬುರಗಿ)- ಪರಿಸರ ಕ್ಷೇತ್ರ

ವೆ. ಅಶ್ವತ್ಥ್ ರಾಮಯ್ಯ(ಬೆಂಗಳೂರು)- ಸಮಾಜ ಸೇವೆ

ಜಂಬಯ್ಯ ನಾಯ್ಕ್(ಕಲಬುರಗಿ)- ಸಮಾಜ ಸೇವೆ

2020ನೇ ಸಾಲಿನ ಪ್ರಶಸ್ತಿಗೆ ಆಯ್ಕೆಯಾದವರು

ಡಾ.‌ಕೆ.ಆರ್. ಪಾಟೀಲ್(ಬೆಳಗಾವಿ)- ಸಮಾಜ ಸೇವೆ

ಡಾ.ಬಿ.ಎಲ್. ವೇಣು(ಬೆಂಗಳೂರು)- ಸಾಹಿತ್ಯ

ಗೌರಿ ಕೊರಗ(ಮೈಸೂರು)- ಸಾಮಾಜಿಕ ಕಾರ್ಯಕರ್ತ

ಮಾರಪ್ಪ ನಾಯಕ್ (ಕಲಬುರಗಿ)- ಸಂಘಟನೆ

ತಿಪ್ಪೇಸ್ವಾಮಿ ಎಸ್.(ಬೆಂಗಳೂರು)- ಸಮಾಜ ಸೇವೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net