ಸುಗಮ ಸಂಗೀತವನ್ನು ಜನಸಾಮಾನ್ಯರ ಬಳಿಗೆ ಕರೆದೊಯ್ಯವ ಜತೆಗೆ 'ಕನ್ನಡವೇ ಸತ್ಯ' ಕಾರ್ಯಕ್ರಮದಂಥ ಇತಿಹಾಸ ಸೃಷ್ಟಿಸಿದ ಈ ಗಾಯಕ ತಮ್ಮ ವರ್ಣರಂಜಿತ ವ್ಯಕ್ತಿತ್ವದಿಂದ ತಾವು ಸ್ಟಾರ್ ಪಟ್ಟಕ್ಕೇರಿದರಲ್ಲದೆ ಸುಗಮ ಸಂಗೀತವನ್ನೂ ಹೊಸ ಎತ್ತರಕ್ಕೆ ಕರೆದೊಯ್ದರು. ಮಂಗಳೂರಿನ ಜಯಂತಿದೇವಿ ಹಿರೇಬೆಟ್, ಮೈಸೂರಿನಲ್ಲಿ ಡಾ. ಶಮಂತಕಮಣಿ, ಎಚ್. ಆರ್ ಲೀಲಾವತಿ, ಎಂ. ವಿ. ಮಾಲತಿ, ಸಿ. ಕೆ. ತಾರಾ ಮತ್ತು ವೈ. ಎಸ್. ಇಂದ್ರಾ, ಎಂ. ಎನ್. ರತ್ನ ಮೋಹನ್ ಕುಮಾರಿ ಮತ್ತು ಸೋಹನ್‌ಕುಮಾರಿ, ಶ್ಯಾಮಲಾ ಜಾಗೀದಾರ್, ಶಾಮಲಾ ಭಾವೆ ಮುಂತಾದ ಗಾಯಕಿಯರು ಸುಗಮ ಸಂಗೀತವನ್ನು ಪೊರೆದರು. ಬಾಳಪ್ಪ ಹುಕ್ಕೇರಿ, ರತ್ನಮಾಲಾ ಪ್ರಕಾಶ್, ಎಂ.ಕೆ. ಜಯಶ್ರೀ, ಬಿ.ಕೆ. ಸುಮಿತ್ರ, ನೀಲಮ್ಮ ಕೊಡ್ಡಿ, ಅನುರಾಧಾ ಧಾರೇಶ್ವ ಮೊದಲಾದ ನೂರಾರು ಮಂದಿ ಪರಂಪರೆ ಮುಂದುವರಿಸಿದರು.