ಸಣ್ಣ ಆವಿಷ್ಕಾರದಿಂದ ಮಹತ್ತರ ಬದಲಾವಣೆ

ಅಂತಾರಾಷ್ಟ್ರೀಯ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಡಾ.ಶ್ರೀನಿವಾಸ ಮಯ್ಯ ಡಿ., ಡಾ.ಹರಿವಿನೋದ್ ಎನ್., ಡಾ.ವಿನಾಯಕ ವಿ.ರಾವ್ ಉಪಸ್ಥಿರಿದ್ದರು.
ಅಂತಾರಾಷ್ಟ್ರೀಯ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಡಾ.ಶ್ರೀನಿವಾಸ ಮಯ್ಯ ಡಿ., ಡಾ.ಹರಿವಿನೋದ್ ಎನ್., ಡಾ.ವಿನಾಯಕ ವಿ.ರಾವ್ ಉಪಸ್ಥಿರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಅಂತಾರಾಷ್ಟ್ರೀಯ ಸಮ್ಮೇಳನ
  • ತಂತ್ರಜ್ಞಾನ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆ
ಮಂಗಳೂರು: ಶ್ರೀನಿವಾಸ ತಾಂತ್ರಿಕ ಮಹಾ ವಿದ್ಯಾಲಯ ವತಿಯಿಂದ ‘ಕಂಪ್ಯೂಟರ್ ವಿಜ್ಞಾನ ನವೀನ ಆವಿಷ್ಕಾರಗಳು’ ಅಂತಾರಾಷ್ಟ್ರೀಯ ಸಮ್ಮೇಳನ ನಡೆಯಿತು.
ಪ್ರಾಂಶುಪಾಲ ಡಾ.ಶ್ರೀನಿವಾಸ ಮಯ್ಯ ಡಿ. ಅಧ್ಯಕ್ಷತೆ ವಹಿಸಿ, ಸಣ್ಣ ಸಣ್ಣ ಆವಿಷ್ಕಾರಗಳೇ ಸಮಾಜ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆ ತರಬಲ್ಲವು. ವಿದ್ಯಾರ್ಥಿಗಳು ಹಾಗೂ ಸಂಶೋಧಕರು ಹೊಸ ಆಲೋಚನೆಗಳನ್ನು ಸಮಾಜಮುಖಿಯಾಗಿ ರೂಪಿಸುವತ್ತ ಗಮನ ಹರಿಸಬೇಕು ಎಂದರು.
ಸಮ್ಮೇಳನ ಉದ್ಘಾಟಿಸಿದ ಸೇಂಟ್ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನ ಇಂಟೆಲಿಜೆಂಟ್ ಕಂಪ್ಯೂಟಿಂಗ್ ಆ್ಯಂಡ್ ಬಿಜಿನೆಸ್ ಸಿಸ್ಟಮ್ಸ್ ವಿಭಾಗ ಮುಖ್ಯಸ್ಥ ಡಾ.ಹರಿವಿನೋದ್ ಎನ್. ಮಾತನಾಡಿ, ವಿದ್ಯಾರ್ಥಿಗಳು ಮತ್ತು ಸಂಶೋಧಕರು ಕುತೂಹಲ, ನಿರಂತರ ಪ್ರಯತ್ನ ಹಾಗೂ ಉತ್ತಮ ವ್ಯಕ್ತಿತ್ವ ಬೆಳೆಸಿಕೊಳ್ಳುವುದು ಅಗತ್ಯ ಎಂದರು.
ಸಮ್ಮೇಳನದ ಸಂಯೋಜಕ ಡಾ.ವಿನಾಯಕ.ವಿ.ರಾವ್ ಸಮ್ಮೇಳನದ ಕುರಿತು ಅವಲೋಕನ ನೀಡಿದರು. ಸಹ ಸಂಯೋಜಕ ಪ್ರೊ.ಸುದರ್ಶನ ಕೆ. ಮುಖ್ಯ ಅತಿಥಿಗಳನ್ನು ಪರಿಚಯಿಸಿದರು. ಎಐಎಂಎಲ್ ವಿಭಾಗ ಮುಖ್ಯಸ್ಥ ಪ್ರೊ.ದಯಾ ನಾಯಕ್ ಸ್ವಾಗತಿಸಿದರು. ಕಂಪ್ಯೂಟರ್ ಸೈನ್ಸ್ ವಿಭಾಗದ ಪ್ರೊ.ರೇಷ್ಮಾ ಬಿ. ವಂದಿಸಿದರು. ಪ್ರೊ.ಸ್ಪೂರ್ತಿ ಬಿ., ಪ್ರೊ.ಸೌಮ್ಯಾ ಕಾರ್ಯಕ್ರಮ ನಿರೂಪಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net