ಸೀಬೆ ಹಣ್ಣು ಕೀಳಲು ಹೋದ ಅಕ್ಕ-ತಂಗಿ ಕೃಷಿಹೊಂಡಕ್ಕೆ ಬಿದ್ದು ಸಾವು! ಮುಗಿಲು ಮುಟ್ಟಿದೆ ಕುಟುಂಬಸ್ಥರ ಆಕ್ರಂದನ

krusihonda
Published on

ಚಾಮರಾಜನಗರ: ಸೀಬೆಹಣ್ಣು ತಿನ್ನುವ ಆಸೆಯಲ್ಲಿ ಮರಕ್ಕೆ ಹತ್ತಿದ ಅಕ್ಕ-ತಂಗಿ ಇಬ್ಬರೂ ಕಾಲುಜಾರಿ ಕೃಷಿ ಹೊಂಡಕ್ಕೆ ಬಿದ್ದು ದುರಂತ ಅಂತ್ಯ ಕಂಡ ಘಟನೆ ಗುಂಡ್ಲುಪೇಟೆ ತಾಲೂಕಿನ ಕೆಬ್ಬೇಪುರ ಗ್ರಾಮದಲ್ಲಿ ಘಟನೆ ಮಂಗಳವಾರ ಸಂಭವಿಸಿದೆ.

ಕೆಬ್ಬೇಪುರ ಗ್ರಾಮದ ರೇಚಣ್ಣ ಎಂಬುವರ ಮಕ್ಕಳಾದ ಪೂಜಾ(8) ಮತ್ತು ಪುಣ್ಯ(9) ಮೃತ ದುರ್ದೈವಿಗಳು. ಅವರದೇ ಜಮೀನಿನಲ್ಲಿ ಕೃಷಿಹೊಂಡಕ್ಕೆ ಮಕ್ಕಳು ಬಲಿಯಾಗಿದ್ದು, ಹೆತ್ತವರ ಆಕ್ರಂದನ ಮುಗಿಲು ಮುಟ್ಟಿದೆ. ಗ್ರಾಮದಲ್ಲಿ ನೀರವ ಮೌನ ಆವರಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net