10 ದಿನ ಮೊದಲೇ ಆ್ಯಸಿಡ್​ ದಾಳಿಗೆ ಸಂಚು ರೂಪಿಸಿದ್ದ! ಮೆಜೆಸ್ಟಿಕ್​ನಲ್ಲಿ ಬೈಕ್​ ಪತ್ತೆ, ತಿರುಪತಿಯಲ್ಲಿ ಆರೋಪಿಗಾಗಿ ಹುಡುಕಾಟ

acid attack love case
Published on

ಬೆಂಗಳೂರು: ಸುಂಕದಕಟ್ಟೆಯಲ್ಲಿ ಹಾಡಹಗಲೇ ಯುವತಿಯ ಮೇಲೆ ಆ್ಯಸಿಡ್​ ದಾಳಿ ನಡೆಸಿ ಪ್ರಕರಣದ ಆರೋಪಿ, ಭಗ್ನಪ್ರೇಮಿ ನಾಗೇಶ್​ ಕೃತ್ಯ ಎಸಗಲು 10 ದಿನ ಮೊದಲೇ ಸಂಚು ರೂಪಿಸಿದ್ದ ಸಂಗತಿ ತನಿಖೆಯಲ್ಲಿ ಗೊತ್ತಾಗಿದೆ.

ಯುವತಿಯ ಮೇಲೆ ಆಸಿಡ್​ ಎರಚಲು ಸಂಚು ರೂಪಿಸಿದ್ದಲ್ಲದೆ, ತನ್ನ ಗಾರ್ಮೆಂಟ್ಸ್​ ಫ್ಯಾಕ್ಟರಿ ಖಾಲಿ ಮಾಡುವ ಸಲುವಾಗಿ ಸ್ಟಾಕ್​ ಸಂಪೂರ್ಣವಾಗಿ ಮಾರಾಟ ಮಾಡಿದ್ದ. ಗಿರಾಕಿಯೊಬ್ಬರನ್ನು ಹಿಡಿದು 1 ಲಕ್ಷ ರೂ.ಗಳಿಗೆ ಸ್ಟಾಕ್​ ಕ್ಲಿಯರೆನ್ಸ್​ ಮಾಡಿದ್ದ. ಆ್ಯಸಿಡ್​ ಹಾಕುವ ಹಿಂದಿನ ದಿನ ಹಣ ಪಡೆದಿದ್ದ. ಸದ್ಯ ಪೊಲೀಸರಿಗೆ ಸುಳಿವು ಸಿಗಬಾರದು ಎಂಬ ಉದ್ದೇಶದಿಂದ ಫೋನ್​, ಎಟಿಎಂ, ಆನ್​ಲೈನ್​, ಬ್ಯಾಂಕ್​ ಖಾತೆಯನ್ನು ಆರೋಪಿ ಬಳಸುತ್ತಿಲ್ಲ ಎಂದು ತಿಳಿದುಬಂದಿದೆ.

ಆ್ಯಸಿಡ್​ ಹಾಕಿದ ಬಳಿಕ ಆರೋಪಿಯು ಪಲ್ಸರ್​ ಬೈಕ್​ನಲ್ಲಿ ಮೆಜೆಸ್ಟಿಕ್​ಗೆ ಬಂದು ಅದನ್ನು ಅಲ್ಲೇ ಬಿಟ್ಟಿದ್ದು, ಪೊಲೀಸರು ವಶಪಡಿಸಿಕೊಂಡಿದ್ದಾರೆ. ಹೊಸಕೋಟೆ ಮಾರ್ಗವಾಗಿ ಮಾಲೂರಿಗೆ ತೆರಳಿರುವುದು ಗೊತ್ತಾಗಿದೆ. ಆ ಬಳಿಕ ಅಲ್ಲಿ ಮೊಬೈಲ್​ ಸ್ವಿಚ್ಡ್​ ಆಫ್​​ ಮಾಡಿ ಪರಾರಿಯಾಗಿದ್ದಾನೆ. ಹೀಗಾಗಿ ಪೊಲೀಸರು ತಿರುಪತಿ ಹಾಗೂ ತಮಿಳುನಾಡಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net